ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲ್ಕತ್ತಾ: ಅಮಿತ್ ಶಾ ರ್‍ಯಾಲಿಯಲ್ಲಿ ಡ್ರೋಣ್ ಬಳಕೆ?

Last Updated 8 ಆಗಸ್ಟ್ 2018, 14:49 IST
ಅಕ್ಷರ ಗಾತ್ರ

ಕೊಲ್ಕತ್ತಾ: ಆಗಸ್ಟ್11ರಂದು ಕೊಲ್ಕತ್ತಾದಲ್ಲಿ ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಅವರ ರ್‍ಯಾಲಿ ನಡೆಯಲಿದ್ದು ರ್‍ಯಾಲಿ ವೇಳೆ ನಿಗಾ ಇರಿಸಲು ಡ್ರೋಣ್ ಹಾರಾಟಕ್ಕೆ ಅನುಮತಿ ನೀಡಬೇಕೆಂದು ಬಿಜೆಪಿ, ಪೊಲೀಸರಲ್ಲಿ ಮನವಿ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಮಿಡ್ನಾಪುರ್‌ನಲ್ಲಿ ರ್‍ಯಾಲಿ ನಡೆದಾಗ ಟೆಂಟ್ ಕುಸಿದು ಬಿದ್ದು 96 ಮಂದಿಗೆ ಗಾಯಗಳಾಗಿತ್ತು.ಹಾಗಾಗಿ ಇಂಥಾ ಘಟನೆ ಮರುಕಳಿಸದಿರಲು ಬಿಜೆಪಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಶನಿವಾರ ರ್‍ಯಾಲಿ ನಡೆಯುವ ವೇಳೆ ಡ್ರೋಣ್ ಮಾತ್ರವಲ್ಲ ವಾಕಿ- ಟಾಕಿ ಬಳಸಲು ಬಿಜೆಪಿ ಅನುಮತಿ ಕೇಳಿದೆ.

ರ್‍ಯಾಲಿ ವೇಳೆ ಒಂದು ಡ್ರೋಣ್ ಬಳಸಲು ಅನುಮತಿ ನೀಡಬೇಕೆಂದು ನಾವು ಕೊಲ್ಕತ್ತಾ ಪೊಲೀಸರಲ್ಲಿ ವಿನಂತಿಸಿದ್ದೇವೆ.ರ್‍ಯಾಲಿ ಪ್ರದೇಶದಲ್ಲಿನ ಆಗು ಹೋಗುಗಳ ಮೇಲೆ ನಿಗಾ ಇರಿಸಲು ಡ್ರೋಣ್ ಹಾರಾಟಕ್ಕೆ ಅನುಮತಿ ನೀಡಬೇಕು. ಸುರಕ್ಷಾ ಉದ್ದೇಶದಿಂದ ಡ್ರೋಣ್ ಬಳಸಲಾಗುತ್ತದೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.ರ್‍ಯಾಲಿ ವೇಳೆ ಯಾವುದೇ ಅಹಿತಕರ ಘಟನೆಗ ಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಘೋಷ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT