ನವದೆಹಲಿ: ಬಿಹಾರ, ಜಾರ್ಖಂಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಸ್ತೆ ನಿರ್ಮಾಣ ಗುತ್ತಿಗೆದಾರರೊಬ್ಬರ ಮನೆ ಮೇಲೆ ಕೇಂದ್ರ ನೇರ ತೆರಿಗೆ ಮಂಡಳಿಯ (ಸಿಬಿಡಿಟಿ) ಅಧಿಕಾರಿಗಳು ಈಚೆಗೆ ದಾಳಿ ನಡೆಸಿದ್ದು, ಪೂರಕ ಆಧಾರವಿಲ್ಲದ ಸುಮಾರು ₹ 100 ಕೋಟಿ ಕಪ್ಪು ಹಣವನ್ನು ಪತ್ತೆಹಚ್ಚಿದ್ದಾರೆ.

ಸಿಬಿಡಿಟಿಯು ಆದಾಯ ತೆರಿಗೆ ಇಲಾಖೆಗೆ ನೀತಿಯನ್ನು ರೂಪಿಸಲಿದೆ. ಅ.27ರಂದು ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಮಹಾರಾಷ್ಟ್ರದಲ್ಲಿ ದಾಳಿ ನಡೆಯಿತು. ₹ 5.71 ಕೋಟಿ ನಗದು ಜಪ್ತಿ ಮಾಡಲಾಗಿದೆ. ವಿವಿಧ ಬ್ಯಾಂಕ್‌ಗಳ 10 ಲಾಕರ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಬಿಡಿಟಿ ಈ ಕುರಿತ ಹೇಳಿಕೆಯಲ್ಲಿ ತಿಳಿಸಿದೆ.

ಲಾಭದಿಂದ ಹಲವು ಪರಿಕರಗಳನ್ನು ಖರೀದಿಸಿ, ವೆಚ್ಚವಾಗಿ ತೋರಿಸಲಾಗುತ್ತಿತ್ತು. ಬಳಿಕ ಪರಿಕರಗಳನ್ನು ಮಾರಾಟ ಮಾಡಿ ನಗದೀಕರಣ ಮಾಡಿಕೊಳ್ಳುತ್ತಿತ್ತು. ಈ ನಗದಿಗೆ ದಾಖಲೆಗಳು ಇರಲಿಲ್ಲ ಎಂದು ತಿಳಿಸಿದೆ.

ಕೈಬರಹದ ಡೈರಿಗಳನ್ನು ಕಮಿಷನ್ ಏಜೆಂಟರ ಸ್ಥಳದಿಂದ ಜಪ್ತಿ ಮಾಡಿದ್ದು, ವಹಿವಾಟಿಗೆ ಸ್ಪಷ್ಟ ದಾಖಲೆಗಳು ಇರಲಿಲ್ಲ. ಬಿಲ್ ಮತ್ತು ಸ್ವೀಕೃತಿ ಪತ್ರಗಳು ಇರಲಿಲ್ಲ ಎಂದು ಹೇಳಿಕೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.