ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷಯ್ ಕುಮಾರ್‌ಗೆ ಭಾರತದ ಪೌರತ್ವ; ಸ್ವಾತಂತ್ರ್ಯ ದಿನಾಚರಣೆಯಂದು ಪ್ರಕಟಿಸಿದ ನಟ

Published 15 ಆಗಸ್ಟ್ 2023, 9:03 IST
Last Updated 15 ಆಗಸ್ಟ್ 2023, 9:03 IST
ಅಕ್ಷರ ಗಾತ್ರ

ಮುಂಬೈ: ಕೆನೆಡಾ ಪ್ರಜೆಯಾಗಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾರತದ ಪೌರತ್ವವನ್ನು ಪಡೆದಿದ್ದಾರೆ. ಸ್ವಾತಂತ್ರ್ಯೋತ್ಸವ ದಿನದಂದು ಅವರು ಈ ವಿಷಯವನ್ನು ಹಂಚಿಕೊಂಡಿದ್ದಾರೆ. 

55 ವರ್ಷದ ಅಕ್ಷಯ್ ಕುಮಾರ್ ಅವರು ತಮ್ಮ ಎಕ್ಸ್ ಖಾತೆ (@akshaykumar)ಯಲ್ಲಿ ’ಈಗ ಹೃದಯ ಹಾಗೂ ಪೌರತ್ವ ಎರಡೂ ಹಿಂದೂಸ್ಥಾನಿ. ಸ್ವಾತಂತ್ರ್ಯೋತ್ಸವದ ಶುಭಾಶಯಗಳು! ಜೈ ಹಿಂದ್’ ಎಂದು ಬರೆದುಕೊಂಡಿದ್ದಾರೆ.

1990ರಲ್ಲಿ ಸತತ 15 ಚಿತ್ರಗಳ ಸೋಲಿನ ನಂತರ ಕೆನಡಾ ದೇಶದ ಪೌರತ್ವ ಪಡೆಯುವುದು ಅವರಿಗೆ ಅನಿವಾರ್ಯವಾಗಿತ್ತಂತೆ. ಅದು ತಮ್ಮ ಬದುಕಿನ ಅತ್ಯಂತ ಕಠಿಣ ಪರಿಸ್ಥಿತಿ ಎಂದು ಈ ಹಿಂದೆ ಅಕ್ಷಯ್ ಹೇಳಿದ್ದರು.

2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯೇತರ ಸಂದರ್ಶನವನ್ನು ಅಕ್ಷಯ್ ಕುಮಾರ್ ನಡೆಸಿಕೊಟ್ಟಿದ್ದರು. ಆದರೆ ಆ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಅವರು ಮತ ಚಲಾಯಿಸಿರಲಿಲ್ಲ. ಇದು ಅವರ ಪೌರತ್ವದ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.

ಭಾರತೀಯ ಪೌರತ್ವ ಪಡೆಯಲು ಅರ್ಜಿ ಸಲ್ಲಿಸಿರುವುದಾಗಿ ಆ ಸಂದರ್ಭದಲ್ಲಿ ಅಕ್ಷಯ್ ಹೇಳಿದ್ದರು. ಬಹು ಬೇಡಿಕೆಯ ನಟ ಅಕ್ಷಯ್ ಕುಮಾರ್ ಅವರ ‘ಒ ಮೈ ಗಾಡ್‌–2’ ಚಿತ್ರ ಇತ್ತೀಚೆಗೆ ತೆರೆ ಕಂಡಿದೆ. ಪಂಕಜ್ ತ್ರಿಪಾಠಿ ಹಾಗೂ ಯಾಮಿ ಗೌತಮ್ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT