ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಫ್ಯಾಕ್ಟ್‌ ಚೆಕ್‌ ಘಟಕ ಸ್ಥಾಪನೆ ನಿಯಮ ರದ್ದು

ಅಸಾಂವಿಧಾನಿಕ ಎಂದ ಬಾಂಬೆ ಹೈಕೋರ್ಟ್‌
Published : 20 ಸೆಪ್ಟೆಂಬರ್ 2024, 15:24 IST
Last Updated : 20 ಸೆಪ್ಟೆಂಬರ್ 2024, 15:24 IST
ಫಾಲೋ ಮಾಡಿ
Comments

ಮುಂಬೈ: ಸರ್ಕಾರದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳ ಪತ್ತೆಗಾಗಿ  ಫ್ಯಾಕ್ಟ್‌ ಚೆಕ್‌ ಘಟಕ ಸ್ಥಾಪನೆಗೆ ಅನುವು ಮಾಡಿಕೊಡುವ ಮಾಹಿತಿ ತಂತ್ರಜ್ಞಾನ (ಐಟಿ) ತಿದ್ದುಪಡಿ ನಿಯಮಗಳನ್ನು ಬಾಂಬೆ ಹೈಕೋರ್ಟ್‌ ಶುಕ್ರವಾರ ರದ್ದು ಮಾಡಿದೆ. ಈ ನಿಯಮಗಳು ಅಸಾಂವಿಧಾನಿಕ ಎಂದು ಬಾಂಬೆ ಹೈಕೋರ್ಟ್  ಹೇಳಿದೆ. 

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಚಂದೂರ್‌ಕರ್ ಅವರು, ಈ ನಿಯಮಗಳು ಸಂವಿಧಾನದ 14ನೇ ವಿಧಿ (ಸಮಾನತೆಯ ಹಕ್ಕು), 19ನೇ ವಿಧಿ (ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು) ಮತ್ತು 19(1)ನೇ ವಿಧಿಯನ್ನು (ವೃತ್ತಿ  ಮತ್ತು ಸ್ವಾತಂತ್ರ್ಯ ಹಕ್ಕು)  ಉಲ್ಲಂಘಿಸುತ್ತವೆ ಎಂದು ಹೇಳಿದರು.

ಐಟಿ ತಿದ್ದುಪಡಿ ನಿಯಮ–2023ಕ್ಕೆ ಅದರಲ್ಲೂ ವಿಶೇಷವಾಗಿ ನಿಯಮ–3ಕ್ಕೆ ತೀವ್ರ ಟೀಕೆ ವ್ಯಕ್ತವಾಗಿತ್ತು. ‘ಸುಳ್ಳು ಮತ್ತು ದಾರಿ ತಪ್ಪಿಸುವ ಸುದ್ದಿ’ಗಳ ಪತ್ತೆಗಾಗಿ ಫ್ಯಾಕ್ಟ್‌ಚೆಕ್‌ ಘಟಕ ಸ್ಥಾಪನೆಗೆ ನಿಯಮ–3 ಅನುವು ಮಾಡಿಕೊಡುತ್ತದೆ.

ಇದನ್ನು ಪ್ರಶ್ನಿಸಿ ಸ್ಟ್ಯಾಂಡ್ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಮತ್ತು ಇತರರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ಬಗ್ಗೆ ವಿಭಾಗೀಯ ಪೀಠವು ಜನವರಿಯಲ್ಲಿ ಭಿನ್ನಮತದ ತೀರ್ಪು ಪ್ರಕಟಿಸಿತ್ತು. ನಂತರ ಅರ್ಜಿ ವಿಚಾರಣೆಯ ಹೊಣೆ ನ್ಯಾಯಮೂರ್ತಿ ಎ.ಎಸ್‌.ಚಂದೂರ್‌ಕರ್‌ ಅವರ ಹೆಗಲಿಗೇರಿತ್ತು.

‘ಸುಪ್ರೀಂ’ ಯೂಟ್ಯೂಬ್‌ ಚಾನೆಲ್‌ ಹ್ಯಾಕ್

ನವದೆಹಲಿ: ಸುಪ್ರೀಂ ಕೋರ್ಟ್‌ ಯೂಟ್ಯೂಬ್‌ ಚಾನೆಲ್‌ ಅನ್ನು ಶುಕ್ರವಾರ ಹ್ಯಾಕ್‌ ಮಾಡಲಾಗಿದೆ. ಅಮೆರಿಕದ ರಿಪ್ಪಲ್ ಲ್ಯಾಬ್ಸ್‌ ಎಂಬ ಕಂಪನಿ ಅಭಿವೃದ್ಧಿಪಡಿಸಿದ ಕ್ರಿಪ್ಟೊಕರೆನ್ಸಿಯ ವಿಡಿಯೊಗಳು ಸುಪ್ರೀಂ ಕೋರ್ಟ್ ಯೂಟ್ಯೂಬ್‌ ಚಾನೆಲ್‌ನಲ್ಲಿ ಪ್ರಸಾರವಾಗಿದ್ದವು. ‘ಕ್ರಿಪ್ಟೊಕರೆನ್ಸಿಯ ದರ ಕುರಿತು ನೇರ ಪ್ರಸಾರ ಮಾಡಲಾಗುತ್ತಿದೆ’ ಎಂಬ ಬರಹದೊಂದಿಗೆ ವಿಡಿಯೊ ಪ್ರಸಾರಗೊಂಡಿತ್ತು. ‘ಸುಪ್ರೀಂ ಕೋರ್ಟ್‌ ಯೂಟ್ಯೂಬ್‌ ಚಾನೆಲ್‌ ಅನ್ನು ಹ್ಯಾಕ್‌ ಮಾಡಲಾಗಿದೆ. ಶೀಘ್ರವೇ ಚಾನೆಲ್‌ ಸೇವೆಯನ್ನು ಆರಂಭಿಸಲಾಗುತ್ತದೆ’ ಎಂದು ಸುಪ್ರೀಂ ಕೋರ್ಟ್‌ ತನ್ನ ‘ಎಕ್ಸ್‌’ ಖಾತೆಯಲ್ಲಿ ಬರೆದುಕೊಂಡಿತ್ತು. ಸಂವಿಧಾನ ಪೀಠಗಳ ಮುಂದಿರುವ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯ ನೇರ ಪ್ರಸಾರಕ್ಕಾಗಿ ಸುಪ್ರೀಂ ಕೋರ್ಟ್‌ ಯೂಟ್ಯೂಬ್‌ ಚಾನೆಲ್‌ ಬಳಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT