ಮುಂಬೈ: ‘ಈಗ ಬಳಕೆಯಾಗುತ್ತಿರುವ ‘ಕೋಮು ಸಿದ್ಧಾಂತಗಳು’ ಬ್ರಿಟಿಷ್ ವಸಾಹತುಶಾಹಿಗಳು ಧರ್ಮದ ಆಧಾರದ ಮೇಲೆ ಜನರ ಒಗ್ಗಟ್ಟನ್ನು ಒಡೆಯಲು ಬಳಸುತ್ತಿದ್ದ ತಂತ್ರಗಳೇ ಆಗಿವೆ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ಟೀಕಿಸಿದರು.

ಮುಂಬೈನಲ್ಲಿ ಕಾರ್ಯಕ್ರಮವೊಂದರಲ್ಲಿ ‘ಕೋಮುವಾದ ವಿರುದ್ಧ ರಾಷ್ಟ್ರ ಹೋರಾಟ’ ವಿಷಯದ ಕುರಿತು ಅವರು ಮಾತನಾಡಿದರು.

‘ಭಾರತದ ಸ್ವಾತಂತ್ರ್ಯ ಹೋರಾಟ ವಸಹತುಶಾಹಿಯ ವಿರೋಧವೇ ಆಗಿತ್ತು. ಈಗಲೂ ಅದರ ವಿರುದ್ಧವೇ ಆಗಿದೆ. ಈ ವಸಾಹತುಶಾಹಿಗಳ ಜೊತೆ ನಿಂತವರ ವಿರುದ್ಧ ನಮ್ಮ ಚಳುವಳಿ’ ಎಂದು ಅವರು ಹೇಳಿದರು.

‘ಹಿಂದೆ ಬ್ರಿಟಿಷರು ಧರ್ಮದ ಆಧಾರದಲ್ಲಿ ಜನರನ್ನು ಒಡೆದು ಒಗ್ಗಟ್ಟನ್ನು ಹಾಳು ಮಾಡಿ, ಭಾರತವನ್ನು ವಶದಲ್ಲಿಟ್ಟುಕೊಳ್ಳುವ ತಂತ್ರ ರೂಪಿಸಿದ್ದರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.