ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಆರ್‌ಒದಿಂದ ಮೊದಲ ಮಹಿಳಾ ಅಧಿಕಾರಿ ನೇಮಕ

ಭಾರತ–ಚೀನಾ ಗಡಿಗುಂಟ ರಸ್ತೆ ನಿರ್ಮಾಣದ ಉಸ್ತುವಾರಿ
Last Updated 29 ಏಪ್ರಿಲ್ 2021, 7:52 IST
ಅಕ್ಷರ ಗಾತ್ರ

ನವದೆಹಲಿ: ಗಡಿ ರಸ್ತೆಗಳ ಸಂಘಟನೆಯು (ಬಿಆರ್‌ಒ) ತಾನು ಕೈಗೊಳ್ಳುವ ನಿರ್ಮಾಣ ಕಾಮಗಾರಿಯ ಮೇಲ್ವಿಚಾರಣೆಗಾಗಿ ಇದೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಯನ್ನು ನೇಮಕ ಮಾಡಿದೆ.

ಮಹಾರಾಷ್ಟ್ರದ ವಾರ್ಧಾದವರಾದ ವೈಶಾಲಿ ಎಸ್‌.ಹಿವಾಸೆ ಅವರು ಬಿಆರ್‌ಒದ ಅಂಗಸಂಸ್ಥೆಯಾದ ರೋಡ್‌ ಕನ್ಸ್‌ಟ್ರಕ್ಷನ್‌ ಕಂಪನಿಯನ್ನು (ಆರ್‌ಸಿಸಿ) ಮುನ್ನಡೆಸಲಿದ್ದಾರೆ. ಭಾರತ–ಚೀನಾ ಗಡಿಗುಂಟ, ಎತ್ತರದ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಆರ್‌ಸಿಸಿ ಕೈಗೆತ್ತಿಕೊಂಡಿದೆ.

ಎಂ.ಟೆಕ್ ಪದವೀಧರೆಯಾಗಿರುವ ವೈಶಾಲಿ ಅವರು, ಕಾರ್ಗಿಲ್‌ನಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ ಎಂದು ಬಿಆರ್‌ಒ ತಿಳಿಸಿದೆ.

‘ಮಹಿಳೆಯರಿಗೂ ಅವಕಾಶ ನೀಡುವ ಮೂಲಕ ಮಹಿಳಾ ಸಬಲೀಕರಣದ ಹೊಸ ಶಕೆ ಆರಂಭಿಸಲುಸಂಘಟನೆ ಮುಂದಾಗಿದೆ’ ಎಂದೂ ಬಿಆರ್‌ಒ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT