ನವದೆಹಲಿ: ತನ್ನ ರಕ್ಷಣಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಿಕೊಳ್ಳುವ ನಿಟ್ಟಿನಲ್ಲಿ ಗಡಿ ಭದ್ರತಾ ಪಡೆಯು (ಬಿಎಸ್ಎಫ್) ಭಾರತ– ಪಾಕಿಸ್ತಾನ ಗಡಿಯಲ್ಲಿ ಮೊದಲ ‘ಡ್ರೋನ್ ಸ್ಕ್ವಾಡ್ರನ್’ ಅನ್ನು ರಚಿಸುತ್ತಿದೆ.

ಆಪರೇಷನ್ ಸಿಂಧೂರ ವೇಳೆ ಕಲಿತ ಪಾಠಗಳು ಮತ್ತು ಡ್ರೋನ್ಗಳ ಮಾರಕ ದಾಳಿಯನ್ನು ಸಮರ್ಪಕವಾಗಿ ಎದುರಿಸಲು ಈ ವ್ಯವಸ್ಥೆಯನ್ನು ಬಿಎಸ್ಎಫ್ ಸಜ್ಜುಗೊಳಿಸುತ್ತಿದೆ.

ನಿರ್ದಿಷ್ಟ ಗಡಿ ಹೊರಠಾಣೆಗಳಲ್ಲಿ ಈ ‘ಸ್ಕ್ವಾಡ್ರನ್’ ನೆಲೆಗೊಳಿಸಲಾಗುತ್ತದೆ. ಇದು ವಿಚಕ್ಷಣೆ, ಕಣ್ಗಾವಲು ಮತ್ತು ಡ್ರೋನ್ ದಾಳಿಗಳನ್ನು ಸಮರ್ಪಕವಾಗಿ ನಿರ್ವಹಿಸಬಲ್ಲ ವಿಶೇಷ ತರಬೇತಿ ಹೊಂದಿದ ಸಿಬ್ಬಂದಿಯನ್ನು ಒಳಗೊಂಡಿರುತ್ತದೆ ಎಂದು ಮೂಲಗಳು ತಿಳಿಸಿವೆ.

ಆಪರೇಷನ್ ಸಿಂಧೂರದ ಬಳಿಕ ಬಿಎಸ್ಎಫ್ ಎದುರಿಸುತ್ತಿರುವ ಕೆಲ ಸವಾಲುಗಳ ಕುರಿತು ಇತ್ತೀಚೆಗೆ ಪರಿಶೀಲನೆ ನಡೆಸಲಾಗಿತ್ತು. ಆ ವೇಳೆ ‘ಡ್ರೋನ್ ಸ್ಕ್ವಾಡ್ರನ್’ ರಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.