ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್: 3 ಪ್ಯಾಕೆಟ್ ಹೆರಾಯಿನ್, ಡ್ರೋನ್ ಬ್ಯಾಟರಿ ವಶ

ಬಿಎಸ್‌ಎಫ್–ಪಂಜಾಬ್ ಪೊಲೀಸ್‌ ಜಂಟಿ ಕಾರ್ಯಾಚರಣೆ–ಹೆರಾಯಿನ್ ಹಾಗೂ ಡ್ರೋನ್ ಬ್ಯಾಟರಿ ಜಪ್ತಿ
Published 22 ಅಕ್ಟೋಬರ್ 2023, 12:56 IST
Last Updated 22 ಅಕ್ಟೋಬರ್ 2023, 12:56 IST
ಅಕ್ಷರ ಗಾತ್ರ

ತರ್ನ್ ತರನ್‌ (ಪಂಜಾಬ್): ಜಂಟಿ ಕಾರ್ಯಾಚರಣೆ ನಡೆಸಿದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹಾಗೂ ಪಂಜಾಬ್ ಪೊಲೀಸರು ತರ್ನ್ ತರನ್‌ ಗಡಿ ಬಳಿಯ ಭತ್ತದ ಗದ್ದೆಯಲ್ಲಿ 3 ಪ್ಯಾಕೆಟ್ ಹೆರಾಯಿನ್ ಮತ್ತು ಡ್ರೋನ್ ಬ್ಯಾಟರಿಯನ್ನು ವಶಪಡಿಸಿಕೊಂಡಿದೆ.

ಮೂಲಗಳ ಪ್ರಕಾರ, ಇಂದು (ಭಾನುವಾರ) ಬೆಳಗ್ಗೆ ನಿಷಿದ್ಧ ವಸ್ತುಗಳ ಸಾಗಾಣಿಕೆ ಬಗ್ಗೆ ಖಚಿತ ಮಾಹಿತಿ ಪಡೆದ ಬಿಎಸ್‌ಎಫ್ ಮತ್ತು ಪಂಜಾಬ್ ಪೊಲೀಸರು ಮಸ್ತಗಢ ಜಿಲ್ಲೆಯ ತರ್ನ್ ತರನ್‌ ಗ್ರಾಮದ ಹೊರವಲಯದಲ್ಲಿ ಜಂಟಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಕಾರ್ಯಾಚರಣೆಯಲ್ಲಿ ಭತ್ತದ ಗದ್ದೆಯಲ್ಲಿ 3 ಪ್ಯಾಕೆಟ್ ಹೆರಾಯಿನ್ (ಒಟ್ಟು ತೂಕ ಅಂದಾಜು 2.916 ಕೆ.ಜಿ) ಮತ್ತು ಡ್ರೋನ್ ಬ್ಯಾಟರಿ ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್‌ಎಫ್ ಪ್ರಕಟಣೆಯಲ್ಲಿ ತಿಳಿಸಿದೆ.

ಅ.20 ರಂದು, ಬಿಎಸ್ಎಫ್ ಮತ್ತು ಪಂಜಾಬ್ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ತರ್ನ್ ತರನ್ ಜಿಲ್ಲೆಯ ಮರಿಮೇಘಾ ಗ್ರಾಮದಲ್ಲಿ ಮುರಿದ ಸ್ಥಿತಿಯಲ್ಲಿದ್ದ ಡ್ರೋನ್‌ನ್ನು ವಶಪಡಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT