ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತಸರ | ಡ್ರಗ್ಸ್‌ ಸಾಗಿಸುತ್ತಿದ್ದ ಪಾಕಿಸ್ತಾನಿ ಡ್ರೋನ್‌ ಹೊಡೆದುರುಳಿಸಿದ ಬಿಎಸ್‌ಎಫ್‌

Published 23 ಮೇ 2023, 2:40 IST
Last Updated 23 ಮೇ 2023, 2:40 IST
ಅಕ್ಷರ ಗಾತ್ರ

ಅಮೃತಸರ: ಮಾದಕವಸ್ತು ಹೊತ್ತು ತರುತ್ತಿದ್ದ ಪಾಕಿಸ್ತಾನಿ ಡ್ರೋನ್‌ ಅನ್ನು ಗಡಿ ಭದ್ರತಾ ಪಡೆಯು ಪಂಜಾಬ್‌ನ ಅಮೃತಸರ ಬಳಿಯ ಅಂತರರಾಷ್ಟ್ರೀಯ ಗಡಿ ಬಳಿ ಸೋಮವಾರ ಹೊಡೆದುರುಳಿಸಿದೆ.

ಶೋಧ ಕಾರ್ಯ ವೇಳೆ ಎರಡು ಪೊಟ್ಟಣ ಶಂಕಿತ ಹೆರಾಯಿನ್‌ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಪಂಜಾಬ್‌ನ ಅಮೃತಸರದ ಅಂತರರಾಷ್ಟ್ರೀಯ ಗಡಿ ಬಳಿ ಡ್ರಗ್ಸ್ ಸಾಗಿಸುತ್ತಿದ್ದ ಪಾಕಿಸ್ತಾನಿ ಡ್ರೋನ್‌ ಅನ್ನು ಬಿಎಸ್‌ಎಫ್‌ ಹೊಡೆದುರುಳಿಸಿದೆ. ಡ್ರೋನ್‌ ಹೊಡೆದುರಳಿಸಿದ ಬಿಒಪಿ ರಜತಲ್‌ ಪ್ರದೇಶದಲ್ಲಿ ಬಿಎಸ್‌ಎಫ್‌ ಶೋಧ ಕಾರ್ಯಾಚರಣೆ ನಡೆಸಿದೆ. 2 ಪ್ಯಾಕೆಟ್‌ ಶಂಕಿತ ಹೆರಾಯಿನ್‌ ಅನ್ನು ವಶಪಡಿಸಿಕೊಳ್ಳಲಾಗಿದೆ‘ ಎಂದು ಅಮೃತಸರದ ಬಿಎಸ್‌ಎಫ್‌ ಕಮಾಂಡೆಂಟ್‌ ಅಜಯ್ ಕುಮಾರ್‌ ಮಿಶ್ರಾ ಹೇಳಿದ್ದಾರೆ.

ಭಾನುವಾರ ಕೂಡ ಗಡಿ ಬಳಿಕ ಪಾಕಿಸ್ತಾನದ ಡ್ರೋನ್‌ ಅನ್ನು ಬಿಎಸ್‌ಎಫ್‌ ಹೊಡೆದುರುಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT