ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪುಣೆ: ಮಾದಕ ವಸ್ತು ಪೂರೈಕೆ ತಡೆಗೆ ‘ಬುಲ್ಡೋಜರ್ ಅಭಿಯಾನ’

Published 25 ಜೂನ್ 2024, 15:26 IST
Last Updated 25 ಜೂನ್ 2024, 15:26 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದ ಸಾಂಸ್ಕೃತಿಕ ನಗರ ಎಂದೇ ಗುರುತಿಸಲಾಗುವ ಪುಣೆಯನ್ನು ‘ಮಾದಕವಸ್ತು ಮುಕ್ತ ನಗರ’ವಾಗಿಸುವ ಗುರಿ ಸಾಧನೆಗಾಗಿ ಅನಧಿಕೃತ ಬಾರ್ ಮತ್ತು ಪಬ್‌ಗಳ ವಿರುದ್ಧ ಬುಲ್ಡೋಜರ್ ಅಭಿಯಾನ ಆರಂಭಿಸಲು ಸರ್ಕಾರ ನಿರ್ಧರಿಸಿದೆ.

ಪುಣೆಯಲ್ಲಿ ಮಾದಕ ವಸ್ತುಗಳ ಪೂರೈಕೆ ಹೆಚ್ಚಾಗಿದೆ ಎಂಬ ಬೆಳವಣಿಗೆ ಕುರಿತಂತೆ ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಏಕನಾಥ ಶಿಂದೆ, ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ವರಿಷ್ಠಾಧಿಕಾರಿ ಅಮಿತೇಶ್‌ ಕುಮಾರ್‌ ಅವರಿಗೆ ಸೂಚಿಸಿದ್ದಾರೆ.

ಕಾರ್ಯಾಚರಣೆಗೆ ಇಳಿದಿರುವ ಪುಣೆ ಜಿಲ್ಲಾಡಳಿತ ಮತ್ತು ಮಹಾನಗರಪಾಲಿಕೆಯ, ಅನಧಿಕೃತ ಪಬ್ ಮತ್ತು ಬಾರ್‌ಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ರವಾನಿಸಿದೆ.

ಗೃಹ ಖಾತೆಯನ್ನು ಹೊಂದಿರುವ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು, ಡ್ರಗ್ಸ್ ಮಾರಾಟವನ್ನು ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಇದರ ವಿರುದ್ಧ ಬುಲ್ಡೋಜರ್ ಕಾರ್ಯಾಚರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಇಬ್ಬರು ಬಾಲಕರು ಪಬ್‌ವೊಂದರ ಬಳಿಕ ಮಾದಕ ವಸ್ತು ಸೇವಿಸುತ್ತಿರುವ ವಿಡಿಯೊ ಈಚೆಗೆ ಸಾಕಷ್ಟು ಹಂಚಿಕೆಯಾಗಿತ್ತು. ಅಂತೆಯೇ, ಬಾರ್‌ಗಳ ಅವಧಿ ಮುಗಿದ ಬಳಿಕವೂ 24ಕ್ಕೂ ಅಧಿಕ ಯುವಜನರು ಪಾರ್ಟಿ ಮಾಡುತ್ತಿದ್ದ ವಿಡಿಯೊ ಕೂಡಾ ಹರಿದಾಡಿತ್ತು. 

ಈ ಹಿನ್ನೆಲೆಯಲ್ಲಿ ಡ್ರಗ್ಸ್‌ಗಳ ಮಾರಾಟ, ಪೂರೈಕೆ ತಡೆಗೆ ಪೊಲೀಸರು ಮುಂದಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT