ಪಾಲ್ಗರ್: ಕಾಮಗಾರಿ ಹಂತದಲ್ಲಿರುವ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಮಾರ್ಗದ ಸಮೀಪ ಇರುವ ಕೆಲವು ಕಟ್ಟಡಗಳಲ್ಲಿ ಬಿರುಕು ಕಂಡುಬಂದಿದೆ. ಪಾಲ್ಗರ್ ಜಿಲ್ಲೆಯ ಹಲವು ಕಟ್ಟಡಳಲ್ಲಿ ಬಿರುಕು ಕಂಡು ಬಂದಿದ್ದು, ಈ ಬಗ್ಗೆ ಯೋಜನೆ ಕಾರ್ಯಗತಗೊಳಿಸುತ್ತಿರುವ ನ್ಯಾಷನಲ್ ಹೈ ಸ್ಪೀಡ್ ರೈಲು ಕಾರ್ಪೊರೇಷನ್ ನಿಯಮಿತ (ಎನ್ಎಚ್ಆರ್ಸಿಎಲ್) ಸಮೀಕ್ಷೆ ಆರಂಭಿಸಿದೆ.
.ಶೀಘ್ರದಲ್ಲೇ ಬುಲೆಟ್ ರೈಲು; ಎರಡೇ ಗಂಟೆಯಲ್ಲಿ ಮುಂಬೈ–ಅಹಮದಾಬಾದ್ ಪ್ರಯಾಣ: ವೈಷ್ಣವ್.
ಪಾರದರ್ಶಕತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಮತ್ತು ಸ್ಥಳೀಯ ಗ್ರಾಮಸ್ಥರ ಸಮ್ಮುಖದಲ್ಲಿ ಈ ಪ್ರದೇಶದಲ್ಲಿ ‘ನಿಯಂತ್ರಿತ ಸ್ಫೋಟ ನಡೆಯುತ್ತಿದೆ ಎಂದು ಎನ್ಎಚ್ಆರ್ಸಿಎಲ್ ತಿಳಿಸಿದೆ.

ಪರಿಸ್ಥಿತಿಯನ್ನು ನಿರ್ಣಯಿಸಲು ಮತ್ತು ಹಾನಿಯ ಕಾರಣವನ್ನು ನಿರ್ಧರಿಸಲು ತಾಂತ್ರಿಕ ತಂಡವನ್ನು ಸಜ್ಜುಗೊಳಿಸಲಾಗಿದೆ ಎಂದು ಎನ್ಎಚ್ಆರ್ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಸ್ವತಂತ್ರ ಮೌಲ್ಯಮಾಪನವನ್ನು ಖಚಿತಪಡಿಸಿಕೊಳ್ಳಲು ಹಾಗೂ ವಿವರವಾದ ಸಮೀಕ್ಷೆ ಕೈಗೊಳ್ಳಲು ಎನ್ಎಚ್ಆರ್ಸಿಎಲ್ ಮೂರನೇ ವ್ಯಕ್ತಿಯ ತಾಂತ್ರಿಕ ತಜ್ಞ ಸಂಸ್ಥೆಯನ್ನೂ ನಿಯೋಜಿಸಿದೆ. ಗ್ರಾಮದಲ್ಲಿ ಈಗಾಗಲೇ ಹಾನಿಗೊಂಡ ರಚನೆಗಳ ಸಮೀಕ್ಷೆ ಪ್ರಾರಂಭವಾಗಿದೆ. ಇಲ್ಲಿಯವರೆಗೆ 290 ಕ್ಕೂ ಹೆಚ್ಚು ರಚನೆಗಳ ಸಮೀಕ್ಷೆ ಮಾಡಲಾಗಿದೆ ಎಂದು ಅದು ತಿಳಿಸಿದೆ.
.ಗುಜರಾತ್ | ಬುಲೆಟ್ ರೈಲು ಯೋಜನೆ ಸ್ಥಳದಲ್ಲಿ ಜಾರಿದ ಯಂತ್ರ: ರೈಲುಗಳ ಸಂಚಾರ ರದ್ದು.
ಈ ತಜ್ಞ ಸಂಸ್ಥೆಯ ಸಂಶೋಧನೆಗಳು ಅಗತ್ಯವಿರುವ ಪರಿಹಾರ ಕ್ರಮಗಳನ್ನು ಒಳಗೊಂಡಂತೆ ಮುಂದಿನ ಕ್ರಮವನ್ನು ನಿರ್ಧರಿಸುತ್ತದೆ.

ಹೈ ಸ್ಪೀಡ್ ರೈಲು ಕಾರಿಡಾರ್ಗಾಗಿ ನಡೆಯುತ್ತಿರುವ ನಿರ್ಮಾಣ ಕಾರ್ಯಗಳ ವೇಳೆಯಲ್ಲಿ ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡ ಬಗ್ಗೆ ಸ್ಥಳೀಯ ನಿವಾಸಿಗಳು ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ.
.ಅಹಮದಾಬಾದ್: ನಿರ್ಮಾಣ ಹಂತದ ಸಬರಮತಿ ಬುಲೆಟ್ ರೈಲು ನಿಲ್ದಾಣದಲ್ಲಿ ಬೆಂಕಿ ಅವಘಡ.
508 ಕಿಲೋಮೀಟರ್ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯು ವ್ಯಾಪಕವಾದ ಸುರಂಗ ಮಾರ್ಗ, ಬ್ಲಾಸ್ಟಿಂಗ್ ಮತ್ತು ಸುಧಾರಿತ ಸಿವಿಲ್ ಎಂಜಿನಿಯರಿಂಗ್ ಕೆಲಸಗಳನ್ನು ಒಳಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಈ ಮಾರ್ಗದಲ್ಲಿ ಜನರ ಹಾಗೂ ಕಟ್ಟಡಗಳ ಸುರಕ್ಷತೆಯೇ ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.
.ಬುಲೆಟ್ ರೈಲು ಸುರಕ್ಷತೆ ಪರೀಕ್ಷೆಗಾಗಿ ಹಳಿಗಳ ಬದಿಗೆ ಕೂರುವ ಸಿಬ್ಬಂದಿ!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.