ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಎಲ್ಲಿಗೆ ಬೇಕಾದರೂ ಹೋಗಬಲ್ಲೆ': ಪಕ್ಷದ ನಾಯಕರಿಗೆ ಕಾಂಗ್ರೆಸ್‌ ಶಾಸಕ ತಿರುಗೇಟು

Published 28 ಫೆಬ್ರುವರಿ 2024, 3:17 IST
Last Updated 28 ಫೆಬ್ರುವರಿ 2024, 3:17 IST
ಅಕ್ಷರ ಗಾತ್ರ

ಚಂಡೀಗಢ: 'ನಾನು ಎಲ್ಲಿಗೆ ಬೇಕಾದರೂ ಹೋಗಬಲ್ಲೆ'

ನಮ್ಮ ಶಾಸಕರನ್ನು ಬಿಜೆಪಿ ಅಪಹರಿಸಿದೆ ಎಂದು ಕಾಂಗ್ರೆಸ್‌ ನಾಯಕರು ಆರೋಪ ಮಾಡುತ್ತಿರುವುದಕ್ಕೆ, ಅದೇ (ಕಾಂಗ್ರೆಸ್‌) ಪಕ್ಷದ ಶಾಸಕ ರವಿ ಠಾಕೂರ್‌ ಪ್ರತಿಕ್ರಿಯಿಸಿದ್ದು ಹೀಗೆ.

ಹಿಮಾಚಲ ಪ್ರದೇಶದಲ್ಲಿ ರಾಜ್ಯಸಭೆಯ ಏಕೈಕ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ, ಆಡಳಿತ ಪಕ್ಷ ಕಾಂಗ್ರೆಸ್‌ನ ಆರು ಶಾಸಕರು ಅಡ್ಡ ಮತದಾನ ಮಾಡಿದ್ದರು. ಇದರ ಬೆನ್ನಲ್ಲೇ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್‌ ಸುಖು, 'ಕಾಂಗ್ರೆಸ್‌ನ ಐದರಿಂದ ಆರು ಶಾಸಕರನ್ನು ಬಿಜೆಪಿ ಅಪಹರಿಸಿದೆ. ಬಿಜೆಪಿಯವರು ಸಿಆರ್‌ಪಿಎಫ್‌ ಮತ್ತು ಹರಿಯಾಣ ಪೊಲೀಸರ ನೆರವಿನಿಂದ ಹರಿಯಾಣದ ಪಂಚಕುಲಾಕ್ಕೆ ಕರೆದೊಯ್ದಿದ್ದಾರೆ' ಎಂದು ಆರೋಪಿಸಿದ್ದರು.

ಈ ಕುರಿತು ಮಾತನಾಡಿರುವ ರವಿ ಠಾಕೂರ್‌, 'ನಾನಿಲ್ಲಿಗೆ ಬಂದಿದ್ದೇನೆ. ಇದು ನನ್ನ ಖಾಸಗಿ ಸಮಯ. ನಾನು ಎಲ್ಲಿಗೆ ಬೇಕಾದರೂ ಹೋಗಬಲ್ಲೆ' ಎಂದಿದ್ದಾರೆ.

'ಕೆಲವು ಶಾಸಕರನ್ನು ಅಪಹರಿಸಿ ಹರಿಯಾಣಕ್ಕೆ ಕರೆದೊಯ್ಯಲಾಗಿದೆ' ಎಂದು ಮುಖ್ಯಮಂತ್ರಿ ಆರೋಪಿಸಿರುವ ಬಗ್ಗೆ ಮಾಧ್ಯಮದವರು ಕೇಳಿದ್ದಕ್ಕೆ 'ಹಾಗೇನಿಲ್ಲ' ಎಂದು ಹೇಳಿದ್ದಾರೆ.

ಲಾಹೌಲ್‌ ಮತ್ತು ಸ್ಪಿತಿ ಕ್ಷೇತ್ರದ ಶಾಸಕರಾಗಿರುವ ರವಿ ಠಾಕೂರ್‌, 'ರಾಜ್ಯ ಹಾಗೂ ನಮ್ಮ ಕ್ಷೇತ್ರದ ಹಿತದೃಷ್ಟಿಯಿಂದ ಬಿಜೆಪಿಯ ಹರ್ಷ ಮಹಾಜನ್‌ ಅವರನ್ನು ಬೆಂಬಲಿಸಿದ್ದೇವೆ. ಇದರಿಂದಾಗಿ ಕೇಂದ್ರದಿಂದ ಹೆಚ್ಚಿನ ಅನುದಾನ ಸಿಗಲಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್‌ ಆರು ಮಂದಿ ಸೇರಿದಂತೆ ಒಟ್ಟು 9 ಶಾಸಕರು ಹರಿಯಾಣದ ಪಂಚಕುಲಕ್ಕೆ ಕರೆದೊಯ್ಯಲಾಗಿದೆ ಎನ್ನಲಾಗಿದೆ.

ಕಾಂಗ್ರೆಸ್‌ ಅಭ್ಯರ್ಥಿಗೆ ಸೋಲು
68 ಸದಸ್ಯ ಬಲದ ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಕಾಂಗ್ರೆಸ್ 40 ಹಾಗೂ ಬಿಜೆಪಿ 25 ಶಾಸಕರನ್ನು ಹೊಂದಿದ್ದರೆ, ಬಿಜೆಪಿ 25 ಶಾಸಕರನ್ನು ಹೊಂದಿದೆ. ಉಳಿದ ಮೂರು ಕ್ಷೇತ್ರಗಳಲ್ಲಿ ಪಕ್ಷೇತರ ಶಾಸಕರು ಇದ್ದಾರೆ.

ಹಿಮಾಚಲ ಪ್ರದೇಶದಲ್ಲಿ ರಾಜ್ಯಸಭೆಯ ಏಕೈಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಅಭ್ಯರ್ಥಿ ಅಭಿಷೇಕ್‌ ಮನು ಸಿಂಘ್ವಿ ಅವರು, ಬಿಜೆಪಿಯ ಹರ್ಷ ಮಹಾಜನ್‌ ಎದುರು ಸೋಲು ಕಂಡಿದ್ದಾರೆ.

ಇಬ್ಬರೂ 34–34 ಮತ ಗಳಿಸಿದ್ದರು. ಹೀಗಾಗಿ, ವಿಜೇತರನ್ನು ಘೋಷಿಸಲು ಚೀಟಿ ಎತ್ತಲಾಯಿತು. ಆಗ ಮಹಾಜನ್‌ಗೆ ಅದೃಷ್ಟ ಒಲಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT