ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗರ್ಭಿಣಿ ಸಾವಿಗೆ ಕಾರಣರಾದವರ ವಿರುದ್ಧ ಪ್ರಕರಣ ದಾಖಲು

Published 27 ಜೂನ್ 2024, 16:34 IST
Last Updated 27 ಜೂನ್ 2024, 16:34 IST
ಅಕ್ಷರ ಗಾತ್ರ

ಭದೋಹಿ (ಉತ್ತರ ಪ್ರದೇಶ): ಗರ್ಭಿಣಿ ದಲಿತ ಮಹಿಳೆಗೆ ತಪ್ಪು ಚುಚ್ಚುಮದ್ದು ನೀಡಿ ಆಕೆಯ ಸಾವಿಗೆ ಕಾರಣರಾದ ಇಬ್ಬರು ನಕಲಿ ವೈದ್ಯರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮತ್ತು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ. 

ತಮ್ಮ 23 ವರ್ಷ ವಯಸ್ಸಿನ ನಾದಿನಿಯನ್ನು ಪ್ರಸವಕ್ಕಾಗಿ ಇಲ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿತ್ತು. ವೈದ್ಯರಾದ ವಿನಯ್ ಕುಮಾರ್ ಪಾಂಡೆ ಮತ್ತು ಶಿವ್‌ ಬಹದೂರ್‌ ಯಾದವ್‌ ಅವರು ತಮ್ಮಿಂದ 50 ಸಾವಿರ ಮುಂಗಡ ಹಣ ಪಡೆದು, ಚುಚ್ಚುಮದ್ದು ನೀಡಿದರು. ಬಳಿಕ ತಮ್ಮ ನಾದಿನಿ ಮತ್ತು ಆಕೆಯ ಒಂಬತ್ತು ತಿಂಗಳ ಭ್ರೂಣ ಮೃತಪಟ್ಟರು ಎಂದು ಅಂಕಿತ್‌ ಕನೌಜಿಯಾ ಎಂಬುವವರು ಏಪ್ರಿಲ್‌ನಲ್ಲಿ ದೂರು ನೀಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT