ನವದೆಹಲಿ: ಹಾಲಿ ಇರುವ 29 ಕಾರ್ಮಿಕ ಕಾನೂನುಗಳನ್ನು ತರ್ಕಬದ್ಧಗೊಳಿಸಲು ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ತಕ್ಷಣಕ್ಕೆ ಜಾರಿಗೊಳಿಸಲಾಗಿದೆ ಕೇಂದ್ರ ಸರ್ಕಾರ ಶುಕ್ರವಾರ ಘೋಷಿಸಿದೆ.
.ಕಾರ್ಮಿಕ ಕಾನೂನು ತಿದ್ದುಪಡಿಯಿಂದ ಅಪಾಯ: ಆರ್.ಎಸ್.ಬಸವರಾಜ್.
ವೇತನಗಳ ಸಂಹಿತೆ 2019, ಕೈಗಾರಿಕಾ ವ್ಯವಹಾರ ಸಂಹಿತೆ– 2020, ಸಾಮಾಜಿಕ ಭದ್ರತೆ ಸಂಹಿತೆ– 2020 ಮತ್ತು ಉದ್ಯೋಗ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ– 2020 ಅನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.

ನಾಲ್ಕು ಕಾರ್ಮಿಕ ಸಂಹಿತೆಗಳ ಜಾರಿ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದೆ. ಈಗ ಅವುಗಳು ಈ ನೆಲದ ಕಾನೂನುಗಳು ಎಂದು ಕೇಂದ್ರ ಕಾರ್ಮಿಕ ಸಚಿವ ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಕಾರ್ಮಿಕ ನಿಯಮಗಳನ್ನು ಆಧುನೀಕರಿಸುವ ಮೂಲಕ ಕಾರ್ಮಿಕರ ವ್ಯವಸ್ಥೆಯನ್ನು ವಿಕಸನಗೊಳ್ಳುತ್ತಿರುವ ಕೆಲಸದ ಪ್ರಪಂಚದೊಂದಿಗೆ ಜೋಡಿಸುತ್ತದೆ. ಈ ಕ್ರಮವು ಭವಿಷ್ಯಕ್ಕೆ ಸಿದ್ಧವಾಗಿರುವ ಕಾರ್ಯಪಡೆಗೆ ಬಲವಾದ ಅಡಿಪಾಯ ಹಾಕುತ್ತದೆ ಎಂದು ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
.ಕಾರ್ಮಿಕ ಕಾನೂನು: ಜಾಗೃತಿ ಅಗತ್ಯ; ನ್ಯಾಯಾಧೀಶ ರವೀಂದ್ರ ಹೆಗಡೆ.
ಭಾರತದ ಅನೇಕ ಕಾರ್ಮಿಕ ಕಾನೂನುಗಳನ್ನು ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯಾನಂತರದ ಆರಂಭದಲ್ಲಿ (1930-1950ರ ದಶಕ) ರಚಿಸಲಾಗಿದೆ. ಆ ಸಮಯದಲ್ಲಿ ಆರ್ಥಿಕತೆ ಮತ್ತು ಕೆಲಸದ ಪ್ರಪಂಚವು ಮೂಲಭೂತವಾಗಿ ವಿಭಿನ್ನವಾಗಿತ್ತು ಎಂದು ಪ್ರಕಟಣೆ ಹೇಳಿದೆ.

ಹೆಚ್ಚಿನ ಪ್ರಮುಖ ದೇಶಗಳು ಇತ್ತೀಚಿನ ದಶಕಗಳಲ್ಲಿ ತಮ್ಮ ಕಾರ್ಮಿಕ ನಿಯಮಗಳನ್ನು ನವೀಕರಿಸಿದೆ. ಆದರೆ ಭಾರತದಲ್ಲಿ 29 ಕಾರ್ಮಿಕ ಕಾನೂನುಗಳು ಇದ್ದವು. ಇವು ವಿಘಟಿತ, ಸಂಕೀರ್ಣ ಮತ್ತು ಹಲವಾರು ಭಾಗಗಳಲ್ಲಿ ಹಳತಾದ ನಿಬಂಧನೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು ಎಂದು ಪ್ರಕಟಣೆ ಹೇಳಿದೆ.
.ಕಾರ್ಮಿಕ ಕಾನೂನು ವ್ಯಾಪ್ತಿಗೆ ಐಟಿ, ಬಿಟಿ ಕಂಪನಿ: ಸಿಎಂ ಜೊತೆ ಚರ್ಚೆ– ಸಚಿವ ಲಾಡ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.