ಶ್ರೀಹರಿಕೋಟಾ: ಚಂದ್ರನ ಮೇಲ್ಮೈ ಮೇಲೆ ಗಗನನೌಕೆ ಇಳಿಸಿ, ಅಧ್ಯಯನ ಕೈಗೊಳ್ಳುವ ಉದ್ದೇಶದ ‘ಚಂದ್ರಯಾನ–3’ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಚಂದ್ರನತ್ತ ನೆಗೆಯಲು ಶ್ರೀಹರಿಕೋಟಾದಲ್ಲಿರುವ ಉಡ್ಡಯನ ಕೇಂದ್ರದಲ್ಲಿ ಸಿದ್ಧವಾಗಿ ನಿಂತಿರುವ ‘ಬಾಹುಬಲಿ’ ಮಾರ್ಕ್ 3 ರಾಕೇಟ್ನ ಎಲ್110 ಹಂತಕ್ಕೆ ಇಂಧನ ಭರ್ತಿ ಮಾಡುವ ಕಾರ್ಯ ಪೂರ್ಣಗೊಂಡಿದೆ.

ಲ್ಯಾಂಡರ್ (ವಿಕ್ರಮ್) ಹಾಗೂ ರೋವರ್ (ಪ್ರಜ್ಞಾನ) ಹೊತ್ತ ಮಾರ್ಕ್–3, ಇಂದು (ಶುಕ್ರವಾರ) ಮಧ್ಯಾಹ್ನ 2.35ಕ್ಕೆ ನಭಕ್ಕೆ ಚಿಮ್ಮಲಿದೆ. ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.