ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

100.. ನಾಟ್ ಔಟ್! ಚಂದ್ರನ ಅಂಗಳದಲ್ಲಿ 100 ಮೀಟರ್ ಚಲನೆ ಮಾಡಿದ ಪ್ರಜ್ಞಾನ್ ರೋವರ್

ಚಂದ್ರಯಾನ–3 ರ ಪ್ರಜ್ಞಾನ್ ರೋವರ್ ವಿಕ್ರಮ್‌ ಲ್ಯಾಂಡರ್‌ನಿಂದ ಹೊರಬಂದ ನಂತರ ಚಂದ್ರನ ಅಂಗಳದಲ್ಲಿ ಬರೋಬ್ಬರಿ 100 ಮೀಟರ್ ಚಲನೆ ಮಾಡಿದೆ.
Published 2 ಸೆಪ್ಟೆಂಬರ್ 2023, 15:49 IST
Last Updated 2 ಸೆಪ್ಟೆಂಬರ್ 2023, 15:49 IST
ಅಕ್ಷರ ಗಾತ್ರ

ಶ್ರೀಹರಿಕೋಟ: ಚಂದ್ರಯಾನ–3 ರ ಪ್ರಜ್ಞಾನ್ ರೋವರ್ ವಿಕ್ರಮ್‌ ಲ್ಯಾಂಡರ್‌ನಿಂದ ಹೊರಬಂದ ನಂತರ ಚಂದ್ರನ ಅಂಗಳದಲ್ಲಿ ಬರೋಬ್ಬರಿ 100 ಮೀಟರ್ ಚಲನೆ ಮಾಡಿದೆ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಇಸ್ರೊ, ಪ್ರಜ್ಞಾನ್ 100 ಮೀಟರ್–ನಾಟ್ ಔಟ್! ಎಂದೂ ಅದು ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.

ಪ್ರಜ್ಞಾನ್ ರೋವರ್ ಶಿವಶಕ್ತಿ ಪಾಯಿಂಟ್‌ನಿಂದ 100 ಮೀಟರ್ ಚಲನೆ ಮಾಡಿದರೂ ಇನ್ನೂ ಚಲನೆ ಮಾಡಲಿದೆ. ಸಂಶೋಧನೆ ಮುಂದುವರೆಸಲಿದೆ. ಇದೊಂದು ಹೊಸ ದಾಖಲೆ ಎಂದು ಹೇಳಿದೆ.

ಏತನ್ಮಧ್ಯೆ ಶ್ರೀಹರಿಕೋಟದಲ್ಲಿ ಸೂರ್ಯಯಾನದ ಪ್ರಯುಕ್ತ ಆದಿತ್ಯ ಎಲ್ 1 ಉಪಗ್ರಹ ಉಡಾವಣೆಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಇಸ್ರೊ ಅಧ್ಯಕ್ಷ ಎಸ್ ಸೋಮನಾಥ್ ಅವರು, ಚಂದ್ರನ ಅಂಗಳದಲ್ಲಿರುವ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಜ್ಞಾನ್ ರೋವರ್‌ ಅನ್ನು ಚಂದ್ರನ ರಾತ್ರಿ ಸಮಯದ ಕನಿಷ್ಠ ತಾಪಮಾನ ತಡೆದುಕೊಳ್ಳಲು ಎರಡು ದಿನದಲ್ಲಿ ಸ್ಲೀಪ್ ಮೋಡ್‌ಗೆ ಬದಲಾಯಿಸುತ್ತೇವೆ ಎಂದು ಹೇಳಿದ್ದಾರೆ.

ಸಂಶೋಧನೆಗೆ ಪೂರಕವಾಗುವಂತೆ ಅನೇಕ ಮಾಹಿತಿಗಳನ್ನು ರೋವರ್ ಕಳುಹಿಸಿದೆ. ಇನ್ನೂ ಉತ್ತಮ ಕೆಲಸ ಮಾಡುವ ಸ್ಥಿತಿಯಲ್ಲಿ ಅವು ಇವೆ. ಹೀಗಾಗಿ ಅವುಗಳನ್ನು ಸ್ಲೀಪ್ ಮೋಡ್‌ಗೆ ಬದಲಾಯಿಸುತ್ತೇವೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT