ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆಯ(ಇಸ್ರೊ) ಬಹು ನಿರೀಕ್ಷಿತ ಚಂದ್ರಯಾನ–3 ಯೋಜನೆಯು ಅಂತಿಮ ಹಂತಕ್ಕೆ ಬಂದಿದೆ. ನಾಳೆ(ಆ.23) ಸಂಜೆ 6.04ರ ಸುಮಾರಿಗೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಅಡಿ ಇಡಲಿದೆ. ಈ ನಡುವೆ ಚಂದ್ರಯಾನ ನೌಕೆಯ ಸ್ಥಿತಿಗತಿ ಮತ್ತು ಇತರ ಮಾಹಿತಿಗಳನ್ನು ಇಸ್ರೊ ಎಕ್ಸ್(ಟ್ವಿಟರ್) ಮೂಲಕ ಹಂಚಿಕೊಂಡಿದೆ.

ಚಂದ್ರನ ಕಕ್ಷೆಯಲ್ಲಿರುವ ಬಾಹ್ಯಾಕಾಶ ನೌಕೆಗೆ ಸದ್ಯ ಯಾವುದೇ ಅಡ್ಡಿ ಎದುರಾಗಿಲ್ಲ. ಕಾರ್ಯಾಚರಣೆ ವ್ಯವಸ್ಥೆಯಲ್ಲಿನ ಪರಿಶೀಲನೆ ನಡೆಯುತ್ತಿದೆ ಎಂದು ಇಸ್ರೊ ತಿಳಿಸಿದೆ.

ಮಿಷನ್ ಆಪರೇಷನ್ಸ್ ಕಾಂಪ್ಲೆಕ್ಸ್ (ಎಂಒಎಕ್ಸ್) ಶಕ್ತಿ ಮತ್ತು ಉತ್ಸಾಹದಿಂದ ಝೇಂಕರಿಸುತ್ತಿದೆ. ಸಾಫ್ಟ್ ಲ್ಯಾಂಡಿಂಗ್ ಕಾರ್ಯಾಚರಣೆಗಳ ನೇರ ಪ್ರಸಾರವು ಸಂಜೆ 5:20ರಿಂದ ಪ್ರಾರಂಭವಾಗುತ್ತದೆ ಎಂದು ಇಸ್ರೊ ಹೇಳಿದೆ.

ಆಗಸ್ಟ್ 19, 2023ರಂದು ಸುಮಾರು 70 ಕಿಮೀ ಎತ್ತರದಿಂದ ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ (ಎಲ್‌ಪಿಡಿಸಿ) ಸೆರೆಹಿಡಿದ ಚಂದ್ರನ ಚಿತ್ರಗಳು ಲ್ಯಾಂಡರ್ ಮಾಡ್ಯೂಲ್ ಅನ್ನು ಚಂದ್ರನ ಮೇಲೆ ಇಳಿಸುವ ಪ್ರಕ್ರಿಯೆಯಲ್ಲಿ ಸ್ಥಾನ ಹೊಂದಿಸಲು ಸಹಾಯ ಮಾಡುತ್ತವೆ ಎಂದು ಅದು ಹೇಳಿದೆ.

ಈ ನಡುವೆ ಆಗಸ್ಟ್ 20ರಂದು ಲ್ಯಾಂಡರ್ ಇಮೇಜರ್ ಕ್ಯಾಮೆರಾ–4 ಸೆರೆಹಿಡಿದ ಚಿತ್ರಗಳನ್ನೂ ಇಸ್ರೊ ಹಂಚಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.