ಶಿಯೋಪುರ (ಮಧ್ಯಪ್ರದೇಶ): ಕುನೊ ರಾಷ್ಟ್ರೀಯ ಉದ್ಯಾನದ ಕ್ವಾರಂಟೇನ್ ಪ್ರದೇಶದಲ್ಲಿ ಶನಿವಾರ ಬಿಡಲಾದ ನಮೀಬಿಯಾದಿಂದ ತಂದ ಎಂಟು ಚೀತಾಗಳ ಪೈಕಿ ಫ್ರೆಡ್ಡಿ ಮತ್ತು ಆಲ್ಟನ್ ಸೋಮವಾರ ಲವಲವಿಕೆಯಿಂದ ಇದ್ದದ್ದು ಕಂಡುಬಂತು. ಹೆಣ್ಣು ಚೀತಾಗಳಾದ ಸವನ್ನಾ ಮತ್ತು ಸಾಶಾ ಕೂಡ ಉತ್ಸಾಹದಿಂದಲೇ ಇದ್ದವು. ಇತರ ನಾಲ್ಕು ಚೀತಾಗಳಾದ ಒಬಾನ್, ಆಶಾ, ಸಿಬಿಲಿ ಮತ್ತು ಸೈಸಾ ಕೂಡ ಉಲ್ಲಾಸದಲ್ಲಿ ಇದ್ದಂತೆಯೇ ಕಂಡು ಬಂದವು ಎಂದು ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳು ಹೇಳಿದ್ದಾರೆ.