ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಛಗನ್ ಭುಜ್‌ಬಲ್ ಎನ್‌ಸಿಪಿ ತೊರೆಯುವುದಿಲ್ಲ: ವದಂತಿ ಅಲ್ಲಗಳೆದ ಎನ್‌ಸಿಪಿ

Published 19 ಜೂನ್ 2024, 14:37 IST
Last Updated 19 ಜೂನ್ 2024, 14:37 IST
ಅಕ್ಷರ ಗಾತ್ರ

ಮುಂಬೈ: ಹಿರಿಯ ಮುಖಂಡ ಹಾಗೂ ಮಹಾರಾಷ್ಟ್ರ ಸಚಿವ ಛಗನ್ ಭುಜ್‌ಬಲ್ ಪಕ್ಷವನ್ನು ತೊರೆಯುವುದಿಲ್ಲ ಎಂದು ಎನ್‌ಸಿಪಿ (ಅಜಿತ್ ಪವಾರ್ ಬಣ) ಬುಧವಾರ ಸ್ಪಷ್ಟಪಡಿಸಿದೆ. ಛಗನ್ ಅವರು ಪಕ್ಷ ತೊರೆದು ಶಿವಸೇನಾ (ಯುಬಿಟಿ) ಸೇರುತ್ತಾರೆ ಎನ್ನುವ ಸುದ್ದಿಯನ್ನು ಅದು ಅಲ್ಲಗಳೆದಿದೆ. 

ಭುಜ್‌ಬಲ್ ಅವರು ಠಾಕ್ರೆ ಅವರ ಆಪ್ತರಾದ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಭೇಟಿಯಾಗಿದ್ದರ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಎನ್‌ಸಿಪಿ ಅಧ್ಯಕ್ಷ ಸುನಿಲ್ ತತ್ಕರೆ ಅವರು, ‘ಭುಜ್‌ಬಲ್ ಅವರು ಪಕ್ಷ ಬಿಡುತ್ತಾರೆ ಎನ್ನುವುದು ಆಧಾರರಹಿತವಾದ ಸುದ್ದಿ, ಅವರು ನಮ್ಮ ಹಿರಿಯ ನಾಯಕರು’ ಎಂದು ತಿಳಿಸಿದರು.

ಇದೇ ವೇಳೆ ಎನ್‌ಸಿಪಿ (ಎಸ್‌ಪಿ) ಶಾಸಕ, ಶರದ್ ಪವಾರ್ ಮೊಮ್ಮಗ ರೋಹಿತ್ ಪವಾರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಕೇವಲ ಭುಜ್‌ಬಲ್ ಅಷ್ಟೇ ಅಲ್ಲ, ಆಡಳಿತಾರೂಢ ಮೈತ್ರಿಕೂಟದ ಇತರ ಏಳು ಮಂದಿ ಶಾಸಕರು ತಮ್ಮ ಪಕ್ಷ ಸೇರಲಿದ್ದಾರೆ’ ಎಂದು ಹೇಳಿದರು. 

‘ಭುಜ್‌ಬಲ್ ಅವರು ಅನುಭವಿ ನಾಯಕರಾಗಿದ್ದು, ಏನಾಗಲಿದೆ ಎನ್ನುವುದು ಅವರಿಗೆ ಗೊತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT