ನವದೆಹಲಿ: ದೋಕಲಾ ಬಿಕ್ಕಟ್ಟಿನ ಬಳಿಕ ಪೂರ್ವ ಲಡಾಕ್‌ನ ವಾಸ್ತವ ಗಡಿ ನಿಯಂತ್ರಣಾ ರೇಖೆಯ ಸಮೀಪದಲ್ಲಿ ಚೀನಾ 13 ಸೇನಾ ನೆಲೆಗಳನ್ನು ನಿರ್ಮಾಣ ಮಾಡಿದ್ದು ಇವುಗಳಲ್ಲಿ ವಾಯು 3 ನೆಲೆಗಳು ಸೇರಿವೆ ಎಂದು ವರದಿಯಾಗಿದೆ.

2017ರ ದೋಕಲಾ ಬಿಕ್ಕಟ್ಟಿನ ಬಳಿಕ ಚೀನಾ ಸೇನಾ ನೆಲೆಗಳನ್ನು ನಿರ್ಮಾಣ ಮಾಡಲು ಪ್ರಾರಂಭಿಸಿತು ಎಂದು ಭದ್ರತಾ ಮತ್ತು ಗುಪ್ತಚರ ಸಲಹಾ ಸಂಸ್ಥೆ ಸ್ಟ್ರಾಟ್ ಫೋರ್ ಮಂಗಳವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ.

ಇದನ್ನೂ ಓದಿ:ಭಾರತದಿಂದ ತನ್ನವರನ್ನು ವಾಪಸ್ ಕರೆಸಿಕೊಳ್ಳಲು ಮುಂದಾದ ಚೀನಾ

13 ಸೇನಾ ನೆಲೆಗಳ ಪೈಕಿ 3ವಾಯು ನೆಲೆಗಳು, 5 ಹೆಲಿಪೋರ್ಟ್‌ಗಳು ಸೇರಿವೆ.ಕಳೆದ ಮೇ ತಿಂಗಳಲ್ಲಿ ಭಾರತ ಮತ್ತು ಚೀನಾ ನಡುವಿನ ಸೇನಾ ಬಿಕ್ಕಟ್ಟಿನ ಬಳಿಕ 4 ಹೆಲಿಫೋರ್ಟ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ವರದಿ ತಿಳಿಸಿದೆ.

2017ರ ದೋಕಲಾ ಘಟನೆ ಬಳಿಕ ಚೀನಾ ದೇಶ ಭಾರತದ ಗಡಿಯ ಉದ್ದಕ್ಕೂ ಸೇನಾ ನೆಲೆಗಳನ್ನು ಸ್ಥಾಪನೆ ಮಾಡುತ್ತ ಬಂದಿದೆ. ಇವುಗಳಲ್ಲಿ ಶಾಶ್ವತ ಸೇನಾ ನೆಲೆಗಳು ಸೇರಿವೆ. ಹೆಚ್ಚುವರಿ ರನ್‌ವೇಗಳು, ವೀಕ್ಷಣಾ ಗೋಪುರಗಳು ಮತ್ತು ಸೈನಿಕರು ತಂಗಲು ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಈ ಎಲ್ಲಾ ಕಾಮಗಾರಿಗಳು ಭಾರತವನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿದೆ ಎಂದು ಸ್ಟ್ರಾಟ್ ಫೋರ್ ಹೇಳಿದೆ. ಸ್ಟ್ರಾಟ್ ಫೋರ್ ಸಂಸ್ಥೆಯು ಬೆಲ್ಜಿಯಂ ಮೂಲದ ಭದ್ರತಾ ಮತ್ತು ಗುಪ್ತಚರ ಸಲಹಾ ಸಂಸ್ಥೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.