ನವದೆಹಲಿ: ಚೀನಾ ಹಾಗೂ ರಾಷ್ಟ್ರೀಯ ಭದ್ರತೆಯ ಪರಿಣತ ವಿಕ್ರಂ ಮಿಸ್ರಿ ಅವರು ಭಾರತದ ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ಸೋಮವಾರ ಅಧಿಕಾರ ವಹಿಸಿಕೊಂಡರು.

1989ನೇ ಬ್ಯಾಚಿನ ಭಾರತೀಯ ವಿದೇಶಾಂಗ ಇಲಾಖೆಯ ಅಧಿಕಾರಿಯಾಗಿರುವ ಇವರು, ಇಲ್ಲಿಯವರೆಗೂ ರಾಷ್ಟ್ರೀಯ ಭದ್ರತಾ ಉಪ ಸಲಹೆಗಾರರಾಗಿದ್ದರು. ವಿನಯ್ ಕ್ವಾತ್ರ ನಿವೃತ್ತಿಯಿಂದ ತೆರವಾಗಿದ್ದ ಸ್ಥಾನವನ್ನು ತುಂಬಿದ್ದಾರೆ.

ಪೂರ್ವ ಲಡಾಖ್ನ ಗಡಿ ವಿಚಾರದಲ್ಲಿ ಚೀನಾದೊಂದಿಗೆ ಸಂಘರ್ಷ, ರಷ್ಯಾ–ಉಕ್ರೇನ್ ಸಮರ ಸೇರಿದಂತೆ ವಿವಿಧ ಭೌಗೋಳಿಕ ರಾಜಕೀಯ ಸವಾಲುಗಳನ್ನು ಭಾರತ ಎದುರಿಸುತ್ತಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸುವ ಹೊಣೆಗಾರಿಕೆ ಮಿಶ್ರಿ ಮೇಲಿದೆ.

ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮಿಶ್ರಿ ಅವರನ್ನು ‘ಎಕ್ಸ್’ ಮೂಲಕ ಅಭಿನಂದಿಸಿದ್ದು, ಹೊಸ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವಂತಾಗಲಿ‘ ಎಂದು ಹಾರೈಸಿದ್ದಾರೆ.

ಮಿಸ್ರಿ ಅವರು ವಿದೇಶಾಂಗ ಇಲಾಖೆಯ ವಿವಿಧ ವಿಭಾಗ, ಸ್ಪೇನ್, ಮ್ಯಾನ್ಮಾರ್ನಲ್ಲಿ ಭಾರತದ ರಾಯಭಾರಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಮಾಜಿ ಪ್ರಧಾನಿಗಳಾದ ಇಂದ್ರಕುಮಾರ್ ಗುಜ್ರಾಲ್, ಮನಮೋಹನ್ ಸಿಂಗ್ ಹಾಗೂ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಖಾಸಗಿ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಎರಡು ವರ್ಷಗಳ ಕಾಲ ಇವರಿಗೆ ಅಧಿಕಾರದ ಅವಧಿ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.