ಬೀಜಿಂಗ್: ಚೀನಾವು ಅತ್ಯಾಧುನಿಕ ಯುದ್ಧ ವಿಮಾನ ವಾಹಕ ನೌಕೆ ‘ಫುಜಿಯಾನ್’ ಅನ್ನು ಸೇನೆಗೆ ನಿಯೋಜಿಸಿದೆ. ತನ್ನ ಮೂರನೇ ಯುದ್ಧ ವಿಮಾನ ವಾಹಕ ನೌಕೆಯನ್ನು ಸೇನೆಗೆ ನಿಯೋಜಿಸುವ ಕಾರ್ಯಕ್ರಮದಲ್ಲಿ ಅಧ್ಯಕ್ಷ ಷಿ ಜಿನ್ಪಿಂಗ್ ಅವರು ಭಾಗಿಯಾಗಿದ್ದರು.

ದಕ್ಷಿಣ ಚೀನಾದ ಹೈನಾನ್ ಪ್ರಾಂತ್ಯದ ಸಾನ್ಯಾ ಬಂದರಿನಲ್ಲಿ ಗೋಪ್ಯವಾಗಿ ಬುಧವಾರ ಕಾರ್ಯಕ್ರಮ ನಡೆಯಿತು ಎಂದು ಸರ್ಕಾರಿ ಸ್ವಾಮ್ಯದ ಷಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

‘ಫುಜಿಯಾನ್’ ನೌಕೆಯು ‘ಎಲೆಕ್ಟ್ರೋಮ್ಯಾಗ್ನೆಟಿಕ್ ಏರ್ಕ್ರಾಫ್ಟ್ ಲಾಂಚ್ ಸಿಸ್ಟಮ್’ ಅನ್ನು ಹೊಂದಿದೆ. ಅಮೆರಿಕದ ಬಳಿಕ ಇಂಥ ಅತ್ಯಾಧುನಿಕ ನೌಕೆಯನ್ನು ಹೊಂದಿರುವ ಎರಡನೇ ದೇಶ ಚೀನಾ ಆಗಿದೆ. ಅಮೆರಿಕದ ‘ಯುಎಸ್ಎಸ್ ಜೆರಾಲ್ಡ್ ಆರ್. ಫೋರ್ಡ್’ ಯುದ್ಧ ವಿಮಾನ ವಾಹಕ ನೌಕೆಯು ಈ ಅತ್ಯಾಧುನಿಕ ವ್ಯವಸ್ಥೆಯನ್ನು ಹೊಂದಿದೆ.

ಚೀನಾದ ಮೂರು ಯುದ್ಧ ವಿಮಾನ ವಾಹಕ ನೌಕೆಗಳು ಸಾಂಪ್ರದಾಯಿಕ ಇಂಧನ ಚಾಲಿತವಾಗಿವೆ. ಪರಮಾಣು ಶಕ್ತಿ ಚಾಲಿತ ನಾಲ್ಕನೇ ನೌಕೆಯನ್ನು ಅದು ದಾಲಿಯನ್ನಲ್ಲಿ ನಿರ್ಮಿಸುತ್ತಿದೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.