ಧರ್ಮಶಾಲಾ: ‘ಟಿಬೆಟ್ನ ಬೌದ್ಧರ ಧರ್ಮಗುರು ದಲೈ ಲಾಮಾ ಅವರ ಇಲ್ಲಿನ ನಿವಾಸದ ಹತ್ತಿರದಲ್ಲಿಯೇ ಕಳೆದ ನಾಲ್ಕು ತಿಂಗಳಿಗೂ ಅಧಿಕ ದಿನಗಳಿಂದ ವಾಸಿಸುತ್ತಿದ್ದ 60 ವರ್ಷದ ಚೀನಾ ಪ್ರಜೆಯೊಬ್ಬರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಮಂಗಳವಾರ ತಿಳಿಸಿದರು. ಇವರ ಬಳಿ ಭಾರತದ ವೀಸಾ ಇರಲಿಲ್ಲ.

‘ಇಲ್ಲಿನ ಎಸ್ಪಿ ಕಚೇರಿ ಬಂದಿದ್ದ ಚೀನಾ ಪ್ರಜೆಗೆ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತನಾಡಲು ಬರುತ್ತಿರಲಿಲ್ಲ. ಅವರಿಗೆ ಚೀನಾ ಭಾಷೆ ಮಾತ್ರವೇ ಬರುತ್ತಿತ್ತು. ಇದರಿಂದ ಅನುಮಾನಗೊಂಡು ಪರಿಶೀಲನೆ ನಡೆಸಲಾಯಿತು. ಅವರ ಬಳಿ ನೇಪಾಳದ ವೀಸಾ ಇತ್ತು. ಅದು 2025ರ ಸೆ.26ಕ್ಕೆ ಕೊನೆಗೊಂಡಿತ್ತು. ಅಲ್ಲಿಂದ ಫೆ.2ರವರೆಗೆ ಇವರು ಧರ್ಮಶಾಲಾದಲ್ಲಿಯೇ ಉಳಿದುಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.