ನವದೆಹಲಿ:‘ನಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ’ ಎಂದು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ ಗುರುವಾರ ಹೇಳಿದ್ದಾರೆ.

‘ಕೆಲ ದಿನಗಳ ಹಿಂದೆ ನಾನು ನೀಡಿದ್ದ ಹೇಳಿಕೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಕುರಿತು ಕೆಲವರು ನನ್ನ ಗಮನಕ್ಕೆ ತಂದಿದ್ದಾರೆ. ಆದರೆ, ನಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮಧ್ಯಪ್ರದೇಶದ ಖಜುರಾಹೊ ದೇವಸ್ಥಾನ ಸಂಕೀರ್ಣದಲ್ಲಿರುವ ಜಾವರಿ ದೇಗುಲದಲ್ಲಿ ಏಳು ಅಡಿ ಎತ್ತರದ ಭಗವಾನ್ ವಿಷ್ಣು ಮೂರ್ತಿ ಭಗ್ನಗೊಂಡಿದೆ. ಈ ದೇವಸ್ಥಾನವನ್ನು ಮರು ನಿರ್ಮಾಣ ಮಾಡಬೇಕು ಹಾಗೂ ವಿಷ್ಣು ದೇವರ ಮೂರ್ತಿಯನ್ನು ಪುನಃ ಪ್ರತಿಷ್ಠಾಪಿಸಲು ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಿಜೆಐ ನೇತೃತ್ವದ ಪೀಠ ಮೇ 16ರಂದು ವಜಾಗೊಳಿಸಿತ್ತು.

ರಾಕೇಶ್ ದಲಾಲ್ ಎಂಬುವವರು ಈ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ವೇಳೆ, ‘ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲ. ಇದು ಪ್ರಚಾರ ಬಯಸಿ ಸಲ್ಲಿಸಿರುವ ಅರ್ಜಿ. ಈ ವಿಚಾರವಾಗಿ ಏನಾದರೂ ಮಾಡುವಂತೆ ಭಗವಾನ್ ವಿಷ್ಣುವಿನಲ್ಲಿಯೇ ನೀವು ಬೇಡಿಕೊಳ್ಳಿ’ ಎಂದು ಅರ್ಜಿದಾರರನ್ನು ಉದ್ದೇಶಿಸಿ ಸಿಜೆಐ ಹೇಳಿದ್ದರು.

‘ನೀವು ವಿಷ್ಣುವಿನ ಪರಮ ಭಕ್ತ ಎಂದು ಹೇಳಿಕೊಳ್ಳುತ್ತಿರುವಿರಿ. ಹಾಗಾದರೆ, ಈ ವಿಚಾರವಾಗಿ ಪ್ರಾರ್ಥನೆ ಸಲ್ಲಿಸಿ, ಒಂದಿಷ್ಟು ಧ್ಯಾನ ಮಾಡಿ’ ಎಂದೂ ಹೇಳಿದ್ದರು. ‘ನೀವು ಶೈವ ಸಿದ್ಧಾಂತ ವಿರೋಧಿಸದಿದ್ದಲ್ಲಿ, ಖಜುರಾಹೊ ದೇವಸ್ಥಾನ ಸಂಕೀರ್ಣದಲ್ಲಿ ಬೃಹತ್ ಶಿವನ ದೇಗುಲ ಇದೆ. ಅಲ್ಲಿಗೆ ಹೋಗಿ ಪೂಜೆ ಸಲ್ಲಿಸಿ’ ಎಂದಿದ್ದರು.

ಸಿಜೆಐ ಅವರ ಈ ಹೇಳಿಕೆಗಳ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಇದರ ಬೆನ್ನಲ್ಲೇ, ಅವರು ಈ ಸ್ಪಷ್ಟನೆ ನೀಡಿದ್ದಾರೆ.

ಇದೇ ವೇಳೆ, ನ್ಯಾಯಾಂಗ ಇಲಾಖೆಯ ಇಬ್ಬರು ಅಧಿಕಾರಿಗಳು, ‘ಸಿಜೆಐ ಅವರು ಎಲ್ಲ ಧಾರ್ಮಿಕ ಸ್ಥಳಗಳಿಗೂ ಭೇಟಿ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.

‘ನಾನು ಸಿಜೆಐ ಗವಾಯಿ ಅವರನ್ನು ಕಳೆದ 10 ವರ್ಷಗಳಿಂದ ಬಲ್ಲೆ. ಇದು ಗಂಭೀರ ವಿಚಾರ’ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ಧಾರೆ.

‘ಪ್ರತಿಯೊಂದು ಕ್ರಿಯೆಗೂ ಸಮನಾದ ಪ್ರತಿಕ್ರಿಯೆ ಇರುತ್ತದೆ ಎಂಬ ನ್ಯೂಟನ್ನ ನಿಯಮವನ್ನು ನಾವು ಓದಿದ್ದೇವೆ. ಈಗ, ಪ್ರತಿಯೊಂದು ಕ್ರಿಯೆಗೂ ಸಾಮಾಜಿಕ ಜಾಲತಾಣಗಳಲ್ಲಿ ಅನುಚಿತ ಪ್ರತಿಕ್ರಿಯೆ ಕಂಡುಬರುತ್ತಿದೆ’ ಎಂದು ಹೇಳಿದ್ದಾರೆ.

‘ಈ ವಿಚಾರವಾಗಿ ನಾವು ನಿತ್ಯವೂ ತೊಂದರೆ ಅನುಭವಿಸುತ್ತಿದ್ದೇವೆ. ಸಾಮಾಜಿಕ ಮಾಧ್ಯಮವು ಲಂಗು ಲಗಾಮು ಇಲ್ಲದ ಕುದುರೆಯಂತಾಗಿದೆ. ಅದನ್ನು ಪಳಗಿಸುವ ದಾರಿಯೇ ಕಾಣುತ್ತಿಲ್ಲ’ ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಹೇಳಿದ್ದಾರೆ.

ಹಿಂದೂ ಧಾರ್ಮಿಕ ನಂಬಿಕೆಗಳ ಅಪಹಾಸ್ಯ ಮಾಡುವ ಹೇಳಿಕೆ ನೀಡದಿದ್ದರೆ ಉತ್ತಮ: ವಿಎಚ್ಪಿ

ಖಜುರಾಹೊ ದೇವಸ್ಥಾನದಲ್ಲಿ ವಿಷ್ಣು ದೇವರ ಮೂರ್ತಿ ಮರುಪ್ರತಿಷ್ಠಾಪನೆ ಕೋರಿದ್ದ ಅರ್ಜಿ ವಿಚಾರಣೆ ವೇಳೆ ಸಿಜೆಐ ಬಿ.ಆರ್.ಗವಾಯಿ ನೀಡಿದ್ದ ಹೇಳಿಕೆಗಳನ್ನು ವಿಶ್ವ ಹಿಂದೂ ಪರಿಷತ್(ವಿಎಚ್ಪಿ) ಗುರುವಾರ ಖಂಡಿಸಿದೆ. ‘ಹಿಂದೂ ಧಾರ್ಮಿಕ ನಂಬಿಕೆಗಳನ್ನು ಅಪಹಾಸ್ಯ ಮಾಡುವಂತಹ ಹೇಳಿಕೆಗಳನ್ನು ನೀಡದೇ ಇರುವುದು ಒಳ್ಳೆಯದು’ ಎಂದೂ ವಿಎಚ್ಪಿ ಹೇಳಿದೆ. ‘ಸಿಜೆಐ ಅವರು ಮೌಖಿಕವಾಗಿ ವ್ಯಕ್ತಪಡಿಸಿರುವ ಹೇಳಿಕೆಗಳು ಹಿಂದೂ ಧಾರ್ಮಿಕ ನಂಬಿಕೆಗಳನ್ನು ಅಣಕಿಸುವಂತಿವೆ ಎಂಬುದು ನಮ್ಮ ಭಾವನೆ. ನ್ಯಾಯಾಲಯಗಳು ನ್ಯಾಯ ದೇಗುಲಗಳಿದ್ದಂತೆ. ನ್ಯಾಯಾಲಯಗಳ ಮೇಲೆ ಭಾರತೀಯ ಸಮಾಜ ನಂಬಿಕೆ ಹೊಂದಿದೆ. ಹೀಗಾಗಿ ಇಂತಹ ಹೇಳಿಕೆಗಳನ್ನು ಹೇಳದಿರುವುದೇ ಒಳಿತು’ ಎಂದು ವಿಎಚ್ಪಿ ರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ‘ನ್ಯಾಯಾಲಯದ ಕಲಾಪಗಳಲ್ಲಿ ಭಾಗಿಯಾಗಿರುವಾಗ ನಾವು ನೀಡುವ ಹೇಳಿಕೆಗಳ ವಿಚಾರವಾಗಿ ಸಂಯಮ ಕಾಯ್ದುಕೊಳ್ಳುವುದು ನಮ್ಮ ಕರ್ತವ್ಯ. ಕಕ್ಷಿದಾರರು ವಕೀಲರಲ್ಲದೇ ನ್ಯಾಯಮೂರ್ತಿಗಳ ಮೇಲೂ ಈ ಜವಾಬ್ದಾರಿ ಇದೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.