ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC ಪರೀಕ್ಷೆ ವೇಳೆ ಉತ್ತರ ಪತ್ರಿಕೆ ತೋರಿಸಲು ನಿರಾಕರಿಸಿದ ಸಹಪಾಠಿಗೆ ಚಾಕು ಇರಿತ

Published 28 ಮಾರ್ಚ್ 2024, 7:57 IST
Last Updated 28 ಮಾರ್ಚ್ 2024, 7:57 IST
ಅಕ್ಷರ ಗಾತ್ರ

ಥಾಣೆ: ಎಸ್‌ಎಸ್ಎಲ್‌ಸಿ ಲಿಖಿತ ಪರೀಕ್ಷೆಯ ಸಮಯದಲ್ಲಿ ಉತ್ತರ ಪತ್ರಿಕೆಯನ್ನು ತೋರಿಸಲು ನಿರಾಕರಿಸಿದ ಕಾರಣದಿಂದಾಗಿ ತಮ್ಮ ಸಹಪಾಠಿಯನ್ನೇ ಮೂವರು ವಿದ್ಯಾರ್ಥಿಗಳು ಚಾಕುವಿನಿಂದ ಇರಿದಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿ ಪಟ್ಟಣದಲ್ಲಿ ನಡೆದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಪರೀಕ್ಷೆಯ ಬಳಿಕ ಪರೀಕ್ಷಾ ಕೊಠಡಿಯಿಂದ ಹೊರಬಂದ ಮೂವರು ವಿದ್ಯಾರ್ಥಿಗಳು, ಸಂತ್ರಸ್ತನನ್ನು ಅಡ್ಡಗಟ್ಟಿ ಚಾಕುವಿನಿಂದ ದಾಳಿ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಗಾಯಗೊಂಡ ವಿದ್ಯಾರ್ಥಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು.

ಮೂವರು ಆರೋಪಿಗಳ ವಿರುದ್ಧ ಭಿವಂಡಿಯ ಶಾಂತಿ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT