‘ರಸ್ತೆಯಲ್ಲಿನ ವಾಹನಗಳನ್ನು ತೆರವುಗೊಳಿಸುವುದು ನಮ್ಮ ಆದ್ಯತೆ. ಮಣ್ಣು ಕುಸಿತದಿಂದಾಗಿ ತೊಂದರೆಗೆ ಸಿಲುಕಿರುವ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಜಿಲ್ಲಾಡಳಿತದ ಸಿಬ್ಬಂದಿ, ಪೊಲೀಸರು, ಖಾಸಗಿ ಸಂಸ್ಥೆಗಳವರು ಈ ಕೆಲಸಗಳಿಗೆ ಕೈಜೋಡಿಸಿದ್ದಾರೆ. ಲೇಹ್–ಲಡಾಖ್ ಪ್ರವಾಸ ಕೈಗೊಂಡಿರುವವರು ಹಾಗೂ ಅಮರನಾಥ ಯಾತ್ರೆಗೆ ಬಂದಿರುವವರು ಮುಂದಿನ ಆದೇಶದವರೆಗೆ ಕಾಯಬೇಕಿದೆ’ ಎಂದು ಗಂದೇರ್‌ಬಲ್‌ನ ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಸಿ) ಗುಲ್ಜಾರ್ ಅಹಮದ್ ಮಾಹಿತಿ ನೀಡಿದ್ದಾರೆ.