ಪೋರ್ಟ್ಬ್ಲೆರ್: ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಬಳಿ 6 ಟನ್ ನಿಷೇಧಿತ ಮಾದಕ ವಸ್ತು ‘ಮೆಟಾಂಫೆಟಮೈನ್‘ ಅನ್ನು ಸಾಗಿಸುತ್ತಿದ್ದ ಮ್ಯಾನ್ಮಾರ್ನ ಹಡಗೊಂದನ್ನು ವಶಪಡಿಸಿಕೊಂಡಿರುವ ಭಾರತೀಯ ಕರಾವಳಿ ಪಡೆ (ಐಸಿಜಿ) ಅಧಿಕಾರಿಗಳು 6 ಜನರನ್ನು ಬಂಧಿಸಿದ್ದಾರೆ.

ಹಡಗಿನಲ್ಲಿದ್ದ ತಲಾ 2 ಕೆ.ಜಿ ‘ಮೆಟಾಂಫೆಟಮೈನ್‘ ತುಂಬಿದ್ದ ಒಟ್ಟು 3,000 ಪ್ಯಾಕೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಾವಿರಾರು ಕೋಟಿ ಮೌಲ್ಯ ಹೊಂದಿದೆ.

ಮೆಟಾಂಫೆಟಮೈನ್ ಅನ್ನು ಭಾರತ ಮತ್ತು ಇತರ ನೆರೆ ದೇಶಗಳಿಗೆ ಸಾಗಿಸಲು ಉದ್ದೇಶಿಸಲಾಗಿತ್ತು ಎಂದು ತಿಳಿದು ಬಂದಿದ್ದು, ಬಂಧಿತರೆಲ್ಲರೂ ಮ್ಯಾನ್ಮಾರ್ ಪ್ರಜೆಗಳಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ನ.23ರಂದು ಕರಾವಳಿ ಪಡೆಯ ಯುದ್ಧ ವಿಮಾನವು ಎಂದಿನಂತೆ ಗಸ್ತು ತಿರುಗುತ್ತಿದ್ದ ವೇಳೆ ಪೋರ್ಟ್ಬ್ಲೆರ್ನಿಂದ ಸುಮಾರು 150 ಕಿ.ಮೀ ದೂರದಲ್ಲಿರುವ ಬಾರೆನ್ ದ್ವೀಪದಲ್ಲಿ ಮೀನುಗಾರಿಕಾ ಹಡಗಿನ ಚಲನವಲನವು ಪೈಲಟ್ಗೆ ಅನುಮಾನಾಸ್ಪದವಾಗಿ ಕಂಡು ಬಂದಿದೆ. ಕೂಡಲೇ ಪೈಲಟ್, ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಗಸ್ತು ತಿರುಗುತ್ತಿದ್ದ ಕರಾವಳಿ ಪಡೆ ಹಡಗು, ಬಾರೆನ್ ದ್ವೀಪಕ್ಕೆ ತೆರಳಿತು. ಹೆಚ್ಚಿನ ತನಿಖೆಗಾಗಿ ಹಡಗನ್ನು ಪೋರ್ಟ್ಬ್ಲೆರ್ಗೆ ತರಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.