ಭುವನೇಶ್ವರ: ಒಡಿಶಾದಲ್ಲಿ ಈಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ನೀರಸ ಸಾಧನೆ ಹಿನ್ನೆಲೆಯಲ್ಲಿ ರಾಜ್ಯ ಘಟಕದ ಅಧ್ಯಕ್ಷನಿರಂಜನ್ ಪಟ್ನಾಯಕ್ ಅವರನ್ನು ಪದಚ್ಯುತಿಗೊಳಿಬೇಕು ಎಂದು ಒಡಿಶಾದ ಕಾಂಗ್ರೆಸ್ ಶಾಸಕರು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಒಂಬತ್ತು ಶಾಸಕರಿದ್ದು, ಈ ಪೈಕಿ ನಾಲ್ವರು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಸಾಧನೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಕ್ಷ ಉಳಿಯಬೇಕಾಗಿದೆ. ಇದಕ್ಕಾಗಿ ಪರ್ಯಾಯ ನಾಯಕತ್ವ ಅಗತ್ಯ ಎಂದು ಶಾಸಕರಾದ ತಾರಾಪ್ರಸಾದ್ ಬಹಿನಿಪಟಿ, ಎಸ್.ಎಸ್.ಸಲುಜಾ, ಅಧಿಜಾರ್ ಪಾಣಿಗ್ರಾಹಿ, ಮೊಹಮ್ಮದ್ ಮೊಕಿಂ ಒತ್ತಾಯಿಸಿದ್ದಾರೆ.

ನಿರಂಜನ್ ಪಟ್ನಾಯಕ್ ಅವರು ಚುನಾವಣೆ ನಡೆಯುವ ಹೊತ್ತಿನಲ್ಲಿಯೇ ಅನಾರೋಗ್ಯ ಪೀಡಿತರಾಗುತ್ತಾರೆ. ಹೀಗಾಗಿ, ಸದೃಢ ನಾಯಕತ್ವದ ಅಗತ್ಯವಿದೆ ಎಂದು ಶಾಸಕ ಬಹಿನಿಪಾಟಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.