ನವದೆಹಲಿ: ಭಾರತೀಯರು ಸೇರಿದಂತೆ ವಿದೇಶಿಯರು ಬಳಸುವ ಎಚ್–1ಬಿ ವೀಸಾ ಮೇಲೆ ವಾರ್ಷಿಕ 1 ಲಕ್ಷ ಅಮೆರಿಕನ್ ಡಾಲರ್ ಶುಲ್ಕ ವಿಧಿಸುವ ಪ್ರಸ್ತಾವಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಗೆ ಸೂಚಿಸಿದ್ದಾರೆ. ಇದೇ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿಪಕ್ಷ ನಾಯಕರು ವಾಗ್ದಾಳಿ ನಡೆಸಿದ್ದಾರೆ.

ಎಚ್–1ಬಿ ವೀಸಾ ಶುಲ್ಕ ಹೆಚ್ಚಿಸಿದ ಅಮೆರಿಕ ಅಧ್ಯಕ್ಷ ಟ್ರಂಪ್ ನಿರ್ಧಾರ ಕುರಿತು ಮೌನ ವಹಿಸಿರುವ ಪ್ರಧಾನಿ ಮೋದಿ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕರು ಆಕ್ರೋಶ ಹೊರಹಾಕಿದ್ದಾರೆ.

‘ಭಾರತ ದುರ್ಬಲ ಪ್ರಧಾನಿಯನ್ನು ಹೊಂದಿದೆ ಎಂದು ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ’ ಎಂದು ರಾಹುಲ್ ಗಾಂಧಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರೇ, ಹುಟ್ಟುಹಬ್ಬದ ಪ್ರಯುಕ್ತ ಟ್ರಂಪ್ ಅವರಿಂದ ನೀವು ಸ್ವೀಕರಿಸಿದ ರಿಟರ್ನ್ ಉಡುಗೊರೆಗಳಿಂದ ಭಾರತೀಯರು ನೋವನ್ನು ಅನುಭವಿಸುತ್ತಿದ್ದಾರೆ. ನಿಮ್ಮ ‘ಅಬ್ಕಿ ಬಾರ್, ಟ್ರಂಪ್ ಸರ್ಕಾರ’ದಿಂದ ಹುಟ್ಟುಹಬ್ಬದ ರಿಟರ್ನ್ ಉಡುಗೊರೆಗಳು ಇಂತಿವೆ...

* ಎಚ್-1B ವೀಸಾಗಳ ಮೇಲೆ 1 ಲಕ್ಷ ಯುಸ್ ಡಾಲರ್ ವಾರ್ಷಿಕ ಶುಲ್ಕ. ಭಾರತೀಯ ಟೆಕ್ ಕಾರ್ಮಿಕರಿಗೆ ಅತ್ಯಂತ ಕಠಿಣ ಪರಿಣಾಮ ಬೀರುತ್ತದೆ. ಎಚ್-1B ವೀಸಾ ಹೊಂದಿರುವವರಲ್ಲಿ ಶೇ 70ರಷ್ಟು ಭಾರತೀಯರಿದ್ದಾರೆ.

* ಭಾರತದ ಉತ್ಪನ್ನಗಳ ಮೇಲೆ ಅಮೆರಿಕ ಶೇಕಡ 50ರಷ್ಟು ಸುಂಕ ವಿಧಿಸಿದೆ. ಇದರಿಂದ ಭಾರತಕ್ಕೆ ₹2.17 ಲಕ್ಷ ಕೋಟಿ ನಷ್ಟವಾಗಲಿದ್ದು, ಈಗಾಗಲೇ 10 ವಲಯಗಳಲ್ಲಿ ಮಾತ್ರ ನಷ್ಟವನ್ನು ಅಂದಾಜಿಸಲಾಗಿದೆ.

* ಭಾರತೀಯ ಹೊರಗುತ್ತಿಗೆಯನ್ನು ಗುರಿಯಾಗಿಸಿಕೊಂಡು ಬಾಡಿಗೆ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ.

* ಚಬಹಾರ್ ಬಂದರಿನ ವಿನಾಯಿತಿಯನ್ನು ತೆಗೆದುಹಾಕಲಾಗಿದೆ. ಇದರಿಂದ ನಮ್ಮ ಕಾರ್ಯತಂತ್ರದ ಹಿತಾಸಕ್ತಿಗಳಿಗೆ ನಷ್ಟವಾಗಿದೆ.

* ಭಾರತೀಯ ಸರಕುಗಳ ಮೇಲೆ ಶೇಕಡ 100ರಷ್ಟು ಸುಂಕವನ್ನು ವಿಧಿಸಲು ಯುರೋಪಿನ್ ಒಕ್ಕೂಟಕ್ಕೆ ಟ್ರಂಪ್ ಕರೆ ನೀಡಿದ್ದಾರೆ.

* ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಟ್ರಂಪ್ ಹಲವು ಬಾರಿ ಹೇಳಿಕೊಂಡಿದ್ದಾರೆ.

ಭಾರತದ ರಾಷ್ಟ್ರೀಯ ಹಿತಾಸಕ್ತಿಗಳು ಸರ್ವೋಚ್ಚವಾಗಿವೆ. ಟೊಳ್ಳಾದ ಘೋಷಣೆಗಳು ಮತ್ತು ಜನರು ‘ಮೋದಿ, ಮೋದಿ’ ಎಂದು ಜಪಿಸುವಂತೆ ಮಾಡುವುದನ್ನು ವಿದೇಶಾಂಗ ನೀತಿಯಲ್ಲ ಎನ್ನುವುದಿಲ್ಲ. ವಿದೇಶಾಂಗ ನೀತಿಯು ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಕುಟುಕಿದ್ದಾರೆ.
.ಎಚ್–1ಬಿ ವಿಸಾಗೆ 1 ಲಕ್ಷ ಡಾಲರ್ ಶುಲ್ಕ: ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದೇನು?.ಅಮೆರಿಕ | ಎಚ್1–ಬಿ ವಿಸಾಗೆ 1 ಲಕ್ಷ ಡಾಲರ್ ಶುಲ್ಕ: ಭಾರತೀಯರ ಮೇಲೆ ಪರಿಣಾಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.