ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ಮಾನಸಿಕ‌ ರೋಗ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯ

Published 11 ಸೆಪ್ಟೆಂಬರ್ 2023, 10:09 IST
Last Updated 11 ಸೆಪ್ಟೆಂಬರ್ 2023, 10:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: 'ಇಡೀ ಜಗತ್ತೇ ಭಾರತವನ್ನು ಹೊಗಳುತ್ತಿದ್ದರೆ, ಕಾಂಗ್ರೆಸ್ ಜಿ-20 ನಡೆಯುವ ಪ್ರದೇಶದಲ್ಲಿ ನಿಂತ ಮಳೆ ನೀರಿನ ಫೋಟೊ ಟ್ವಿಟ್ ಮಾಡಿ‌ ಮಾನಸಿಕ ರೋಗಿಯಂತೆ ಕಾಂಗ್ರೆಸ್ ವರ್ತಿಸಿದೆ' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದರು.

ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ದೆಹಲಿಯಲ್ಲಿ ಜೋರಾಗಿ ಮಳೆ ಬಂದ ಕಾರಣ ರಸ್ತೆಯಲ್ಲಿ ಸಹಜವಾಗಿ ನೀರು ನಿಂತು, ಹರಿದು ಹೋಗಿದೆ. ಆದರೆ, ರಾಹುಲ್ ಗಾಂಧಿ ಮತ್ತು ಜೈರಾಮ್ ರಮೇಶ ಅವರು ಅದನ್ನೇ ಟ್ವಿಟ್ ಮಾಡಿ ತಮ್ಮ ದಾರಿದ್ರ್ಯತನ ಪ್ರದರ್ಶಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧಿಸುವ ಭರದಲ್ಲಿ, ದೇಶವನ್ನೇ ವಿರೋಧಿಸುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಭಾರತದ 75 ವರ್ಷದ ಇತಿಹಾಸದಲ್ಲಿ ಜಿ-20 ದೊಡ್ಡ ಮೈಲಿಗಲ್ಲು. ಇಲ್ಲಿ ಭಾಗವಹಿಸಿದ ರಾಷ್ಟ್ರಗಳು ಭಿನ್ನಾಭಿಪ್ರಾಯ ವ್ಯಕ್ತಪಡಿಸದೆ ಒಮ್ಮತದ ನಿರ್ಧಾರ ತೆಗೆದುಕೊಂಡಿದ್ದು ದೊಡ್ಡ ಸಾಧನೆ. ಭಾರತದ ನೇತೃತ್ವವನ್ನು ಜಗತ್ತು ಒಪ್ಪಿಕೊಳ್ಳುತ್ತಿದೆ ಎನ್ನುವುದಕ್ಕೆ ಇದು ಸ್ಪಷ್ಟ ನಿದರ್ಶನ. ಅಲ್ಲದೆ, ಎರಡು ದಿನ ನಡೆದ ಸಭೆಯಲ್ಲಿ ರಷ್ಯಾ, ಚೀನಾ ಸೇರಿದಂತೆ ಪಾಲ್ಗೊಂಡಿದ್ದ ಎಲ್ಲ ರಾಷ್ಟ್ರಗಳು ಭಾರತದ ಎಲ್ಲ ಸಲಹೆಗಳನ್ನು ಮಾನ್ಯ ಮಾಡಿವೆ' ಎಂದು ಹೇಳಿದರು.

ಜೆಡಿಎಸ್ ಮೈತ್ರಿ: 'ಸ್ಥಳೀಯ ವಿಚಾರಗಳ ಕುರಿತು ಬಸವರಾಜ ಬೊಮ್ಮಾಯಿ ಅವರು ಜೆಡಿಎಸ್ ಜೊತೆ ಮೈತ್ರಿ ಆಗಿದೆ ಎಂದು ಹೇಳಿಕೆ ನೀಡಿರಬಹುದು. ಆದರೆ, ಈ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಹೊರಬಿದ್ದಿಲ್ಲ. ಅದರ ಬಗ್ಗೆ ನನಗೆ ಸಂಪೂರ್ಣ ಮಾಹಿತಿಯೂ ಇಲ್ಲ. ರಾಷ್ಟ್ರೀಯ ನಾಯಕರು ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ' ಎಂದರು.

ಜೋಶಿ ಆಗ್ರಹ: 'ಶಕ್ತಿ ಯೋಜನೆಯಿಂದ ಖಾಸಗಿ ಬಸ್‌ ಮಾಲೀಕರಿಗೆ, ಚಾಲಕರಿಗೆ ಸಮಸ್ಯೆಯಾಗಿದ್ದು, ಸರ್ಕಾರ ಅವರ ಬಗ್ಗೆಯೂ ಗಮನಹರಿಸಬೇಕು. ಸಾರಿಗೆ ಸಂಸ್ಥೆಗಳ ನಿಗಮಗಳಿಗೂ ಸರ್ಕಾರ ಹಣ ನೀಡುತ್ತಿಲ್ಲ. ಹೀಗಾಗಿ ಅವುಗಳು ಸಹ ನಷ್ಟದಲ್ಲಿದ್ದು, ಸೇವೆಗಳು ಹಾಳಾಗುತ್ತಿವೆ.‌ ಉಚಿತ ಸೇವೆ ಎಂದು ಸರ್ಕಾರ ಮನಬಂದಂತೆ ನಡೆದುಕೊಳ್ಳುತ್ತಿದೆ. ಇದು ಸರಿಯಲ್ಲ. ಎಲ್ಲ ವರ್ಗದವರನ್ನೂ ಗಣನೆಗೆ ತೆಗೆದುಕೊಳ್ಳಬೇಕು' ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT