ನವದೆಹಲಿ: ರಾಜಸ್ಥಾನ ವಿಧಾನಸಭಾ ಚುನಾವಣೆಗೆ 22 ಅಭ್ಯರ್ಥಿಗಳ ಆರನೇ ಪಟ್ಟಿಯನ್ನು ಶನಿವಾರ ತಡರಾತ್ರಿ ಕಾಂಗ್ರೆಸ್ ಬಿಡುಗಡೆ ಮಾಡಿದೆ.

ಜೈಪುರದ ಹವಾ ಮಹಲ್ ಕ್ಷೇತ್ರದಿಂದ ಆರ್. ಆರ್. ತಿವಾರಿ ಅವರನ್ನು ಕಣಕ್ಕಿಳಿಸಿದ್ದು, ಈ ಕ್ಷೇತ್ರದಿಂದ ಟಿಕೆಟ್ ನಿರೀಕ್ಷಿಸಿದ್ದ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಇಲಾಖೆ ಸಚಿವ ಮಹೇಶ್ ಜೋಶಿ (ಗೆಹಲೋತ್ ವಿರುದ್ಧ ಬಂಡಾಯವೆದಿದ್ದ ಕಾರಣಕ್ಕೆ ಇವರಿಗೆ ಪಕ್ಷ ನೋಟಿಸ್ ನೀಡಿತ್ತು) ಅವರಿಗೆ ಈ ಬಾರಿ ಟಿಕೆಟ್ ನಿರಾಕರಿಸಲಾಗಿದೆ.

ಸಂಗರಿಯಾ ಕ್ಷೇತ್ರದಿಂದ ಅಭಿಮನ್ಯು ಪೂನಿಯಾ, ಸೂರ್ಸಾಗರ್ನಿಂದ ಶಹಜದ್ ಖಾನ್, ಭಿಲ್ವಾರಾ ಕ್ಷೇತ್ರದಿಂದ ಓಂ ನಾರಾಯಣಿವಾಲ್ ಮತ್ತು ಲಾಡ್ಪುರ ಕ್ಷೇತ್ರದಿಂದ ನೈಮುದ್ದೀನ್ ಗುಡ್ಡು ಅವರನ್ನು ಕಣಕ್ಕಿಳಿಸಿದೆ.

ಆ ಮೂಲಕ ಕಾಂಗ್ರೆಸ್ ಇಲ್ಲಿಯವರೆಗೆ 200 ಕ್ಷೇತ್ರಗಳ ಪೈಕಿ 178 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದೆ. ಭರತ್ಪುರ ಕ್ಷೇತ್ರವನ್ನು ರಾಷ್ಟ್ರೀಯ ಲೋಕದಳಕ್ಕೆ ಬಿಟ್ಟುಕೊಟ್ಟಿದೆ.

ರಾಜ್ಯ ವಿಧಾನಸಭೆಗೆ ನವೆಂಬರ್ 25ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 3ರಂದು ಮತ ಎಣಿಕೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.