ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಕೂಡ ತಪ್ಪು ಮಾಡಿದೆ: ರಾಹುಲ್ ಗಾಂಧಿ

Published 10 ಮೇ 2024, 16:11 IST
Last Updated 10 ಮೇ 2024, 16:11 IST
ಅಕ್ಷರ ಗಾತ್ರ

ಲಖನೌ: ಕಾಂಗ್ರೆಸ್ ಕೂಡ ತಪ್ಪುಗಳನ್ನು ಮಾಡಿದೆ ಮತ್ತು ಅದು ಭವಿಷ್ಯದಲ್ಲಿ ತನ್ನ ರಾಜಕಾರಣ ಬದಲಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ಅಭಿಪ್ರಾಯಪಟ್ಟಿದ್ದಾರೆ.

‘ಮುಂದಿನ ದಿನಗಳಲ್ಲಿ ಕಾಂಗ್ರೆಸ್ ತನ್ನ ರಾಜಕಾರಣವನ್ನು ಬದಲಿಸಿಕೊಳ್ಳಬೇಕಿದೆ. ಅದು ಆಗಲೇಬೇಕು. ಕಾಂಗ್ರೆಸ್ ಕೂಡ ತಪ್ಪು ಮಾಡಿದೆ ಎಂದು ನಾನು ಪಕ್ಷ ಸೇರಿದಾಗಿನಿಂದಲೂ ಹೇಳುತ್ತಿದ್ದೇನೆ’ ಎಂದರು.

ಲಖನೌದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು, ನರೇಂದ್ರ ಮೋದಿ ಅವರು ಸರ್ವಾಧಿಕಾರಿ ಎಂದು ಆರೋಪಿಸಿದರು ಮತ್ತು ಅವರು ಪ್ರಧಾನಿ ಅಲ್ಲ, ಇಬ್ಬರು ಮೂವರು ಉದ್ಯಮಿಗಳ ಮುಂದಾಳು ಎಂದು ಹೇಳಿದರು.

‘ನಾನು ಪ್ರಧಾನಿಯವರೊಂದಿಗೆ ಚರ್ಚೆಗೆ ಸಿದ್ಧ. ಆದರೆ, ಅದಕ್ಕೆ ಪ್ರಧಾನಿ ಸಿದ್ಧರಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT