ನವದೆಹಲಿ: ಕೋವಿಡ್–19 ವಿರುದ್ಧದ ಕಾರ್ಯತಂತ್ರದ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸಾರ್ಕ್ ( SAARC) ರಾಷ್ಟ್ರಗಳ ನಾಯಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸುತ್ತಿದ್ದಾರೆ.
ಸಾರ್ಕ್ ರಾಷ್ಟ್ರಗಳ ನಾಯಕರು ಈ ವಿಡಿಯೋ ಕಾನ್ಫರೆನ್ಸ್ ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ. ಕೋವಿಡ್ 19 ವಿರುದ್ಧ ಭಾರತ ಕ್ರಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ವಿವರಿಸಿದ್ದಾರೆ.
ಭಾರತದಲ್ಲಿ 150 ಕ್ಕಿಂತಲೂ ಕಡಿಮೆ ಕೋವಿಡ್ 19ಪ್ರಕರಣಗಳು ಪತ್ತೆಯಾಗಿವೆ. ಆದರೂ ನಾವು ಹೆಚ್ಚು ಜಾಗೃತರಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ‘ಜಾಗೃತರಾಗಿ, ಆತಂಕಗೊಳ್ಳಬೇಡಿ’ ಎಂಬ ಮಂತ್ರವನ್ನು ಕೋವಿಡ್ ವಿರುದ್ಧ ಹೋರಾಡಲು ಭಾರತ ಬಳಸುತ್ತಿದೆ. ಹೊರ ದೇಶಗಳಿಂದ ಭಾರತಕ್ಕೆ ಬರುವವರನ್ನು ಪರೀಕ್ಷೆ ಒಳಪಡಿಸುವ ಕಾರ್ಯಕವನ್ನು ಭಾರತದ ಜನವರಿಯ ಮಧ್ಯ ಭಾಗದಿಂದಲೂ ಆರಂಭಿಸಿದೆ. ಅಲ್ಲದೆ, ಪ್ರವಾಸದ ಮೇಲೆ ಸಾಕಷ್ಟು ನಿಯಮಗಳನ್ನು ವಿಧಿಸಿದೆ. ಆತಂಕ ನಿವಾರಿಸಲು ಹಂತ ಹಂತವಾಗಿ ಕ್ರಮಗಳನ್ನು ಕೈಗೊಂಡಿದ್ದೇವೆ. ಹೊರ ದೇಶದಲ್ಲಿರುವ ಭಾರತೀಯರನ್ನು ದೇಶಕ್ಕೆ ಕರೆ ತರುವ ಪ್ರಯತ್ನಗಳನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ. ಈ ವರೆಗೆ 1400 ಮಂದಿಯನ್ನು ಭಾರತಕ್ಕೆ ಕರೆತಂದಿದ್ದೇವೆ. ಇದೇ ವೇಳೆ ನೆರೆ ರಾಷ್ಟ್ರಗಳ ಕೆಲ ನಾಗರಿಕರನ್ನೂ ಸೋಂಕು ಪೀಡಿತ ದೇಶದಿಂದ ಭಾರತ ಕರೆ ತಂದಿದೆ ಎಂದು ಮೋದಿ ವಿಡಿಯೋ ಕಾನ್ಪರೆನ್ಸ್‌ನಲ್ಲಿ ಹೇಳಿದರು.
ವೀಕ್ಷಿಸಿ: ಸಾರ್ಕ್ ರಾಷ್ಟ್ರಗಳ ನಾಯಕರೊಂದಿಗಿನ ಮೋದಿ ವಿಡಿಯೋ ಕಾನ್ಫರೆನ್ಸ್
#WATCH live from Delhi: PM Modi leads India at the video conference of all SAARC member countries, over #COVID19. https://t.co/zi14G2pX7e
— ANI (@ANI) March 15, 2020
I propose we create a COVID-19 Emergency Fund. This could be based on voluntary contributions from all of us. India can start with an initial offer of 10 million US dollars for this fund: PM @narendramodi #SAARCfightsCorona
— PMO India (@PMOIndia) March 15, 2020
We are assembling a Rapid Response Team of doctors and specialists in India, along with testing kits and other equipment. They will be on stand-by, to be placed at your disposal, if required: PM @narendramodi #SAARCfightsCorona
— PMO India (@PMOIndia) March 15, 2020
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.