ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಪೊರೇಟ್‌ ದೇಣಿಗೆ: ಬಹುಪಾಲು ಬಿಜೆಪಿಗೆ

Last Updated 28 ನವೆಂಬರ್ 2018, 20:37 IST
ಅಕ್ಷರ ಗಾತ್ರ

ನವದೆಹಲಿ: ಕಾರ್ಪೊರೇಟ್‌ ಸಂಸ್ಥೆಗಳ ‘ಚುನಾವಣಾ ಟ್ರಸ್ಟ್‌’ಗಳಿಂದ ಅತಿ ಹೆಚ್ಚು ದೇಣಿಗೆ ಪಡೆದ ರಾಜಕೀಯ ಪಕ್ಷಗಳಲ್ಲಿ ಆಡಳಿತಾರೂಢ ಬಿಜೆಪಿ ಮೊದಲ ಸ್ಥಾನದಲ್ಲಿದೆ.

ಒಡಿಶಾದ ನವೀನ್‌ ಪಟ್ನಾಯಿಕ್‌ ನೇತೃತ್ವದ ಬಿಜೆಡಿ ಎರಡನೇ ಸ್ಥಾನದಲ್ಲಿದ್ದುಕಾಂಗ್ರೆಸ್‌ ಪಕ್ಷವನ್ನು ಹಿಂದಿಕ್ಕಿದೆ.

ಕಳೆದ ಹಣಕಾಸು ವರ್ಷದಲ್ಲಿ ಚುನಾವಣಾ ಟ್ರಸ್ಟ್‌ಗಳಿಂದ ಹರಿದು ಬಂದ ಒಟ್ಟು ₹193 ಕೋಟಿ ದೇಣಿಗೆಯಲ್ಲಿ ಶೇ 87ರಷ್ಟು ಅಂದರೆ ₹167.80 ಕೋಟಿ ದೇಣಿಗೆ ಬಿಜೆಪಿ ಪಾಲಾಗಿದೆ.

ಇನ್ನುಳಿದ ಬಾಕಿ ಶೇ 13ರಷ್ಟು ದೇಣಿಗೆ ಯನ್ನು ಕಾಂಗ್ರೆಸ್‌, ಬಿಜೆಡಿ, ಎನ್‌ಸಿಪಿ ಮತ್ತು ಎನ್‌ಸಿ ಈ ನಾಲ್ಕು ರಾಜಕೀಯ ಪಕ್ಷಗಳು ಹಂಚಿಕೊಂಡಿವೆ.

2017–18ನೇ ಹಣಕಾಸು ವರ್ಷದಲ್ಲಿ ಚುನಾವಣಾ ನಿಧಿಗಳಿಂದ ಹರಿದು ಬಂದ ದೇಣಿಯ ವಿವರಗಳ ವರದಿಯನ್ನು ಚುನಾ ವಣಾ ಕಣ್ಗಾವಲು ಸಂಸ್ಥೆ ‘ಅಸೋಸಿಯೇಶನ್‌ ಫಾರ್‌ ಡೆಮಾಕ್ರಟಿಕ್‌ ರೈಟ್ಸ್‌’ (ಎಡಿಆರ್‌) ನೀಡಿದೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಮತ್ತು ಗುಜರಾತ್‌ ಕಾಂಗ್ರೆಸ್‌ ಘಟಕ ಗಳು ಪಕ್ಷಕ್ಕೆ ₹1ಕೋಟಿ ದೇಣಿಗೆ ನೀಡಿವೆ.

ಏನಿದು ಚುನಾವಣಾ ನಿಧಿ?

ಎಲೆಕ್ಟೋರಲ್ ಟ್ರಸ್ಟ್‌ ಅಥವಾ ಚುನಾ ವಣಾ ನಿಧಿಗಳು ಲಾಭರಹಿತ ಸಂಸ್ಥೆಗಳಾಗಿದ್ದು, ಕಾರ್ಪೊರೇಟ್‌ ಕಂಪನಿಗಳ ಚುನಾವಣಾ ದೇಣಿಗೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಇವನ್ನು ಸ್ಥಾಪಿಸಲಾಗಿದೆ.

ಕಾರ್ಪೊರೇಟ್‌ ಸಂಸ್ಥೆಗಳುನೇರವಾಗಿ ರಾಜಕೀಯ ಪಕ್ಷಗಳಿಗೆದೇಣಿಗೆ ನೀಡು ವಂತಿಲ್ಲ. ಚುನಾವಣಾ ನಿಧಿ ಮೂಲಕ ದೇಣಿಗೆ ನೀಡಬಹುದು.

ಕಾರ್ಪೊರೇಟ್ ಸಂಸ್ಥೆಗಳಚುನಾವಣಾ ನಿಧಿಗೆ ನೀಡಲಾಗುವ ದೇಣಿಗೆಗೆ ಸರ್ಕಾರ ತೆರಿಗೆ ವಿನಾಯ್ತಿ ಘೋಷಿಸಿದೆ.

ಚುನಾವಣಾ ನಿಧಿಗಳಿಗಾಗಿ ಕೇಂದ್ರ ಸರ್ಕಾರ 2013ರ ಜನವರಿಯಲ್ಲಿ ಪಾರ ದರ್ಶಕ ನಿಯಮಾವಳಿ ರೂಪಿಸಿದ್ದು, 2013ರ ನಂತರ ಅಸ್ತಿತ್ವಕ್ಕೆ ಬಂದ ಟ್ರಸ್ಟ್‌ಗಳಿಗೆ ಮಾತ್ರ ಈ ನಿಯಮಾವಳಿ ಅನ್ವಯಿಸಲಿವೆ.

22 ಚುನಾವಣಾ ನಿಧಿಗಳ ಪೈಕಿ ಕೇವಲ ಐದು ಮಾತ್ರ ಪಾರದರ್ಶಕತೆ ನಿಯಮಾವಳಿ ವ್ಯಾಪ್ತಿಗೆ ಒಳಪಡುತ್ತವೆ.

2013ಕ್ಕೂ ಮುನ್ನ ಸ್ಥಾಪಿಸಲಾದ ಆರು ಟ್ರಸ್ಟ್‌ಗಳು ಈ ನಿಯಮಾವಳಿ ವ್ಯಾಪ್ತಿಗೆ ಒಳಪಡುವುದಿಲ್ಲ. ಹೀಗಾಗಿ ಈ ಟ್ರಸ್ಟ್‌ಗಳು ರಾಜಕೀಯ ಪಕ್ಷಗಳಿಗೆ ದೊಡ್ಡ ಮೊತ್ತದ ದೇಣಿಗೆ ನೀಡಿದರೂ ಅದರ ಮಾಹಿತಿಯನ್ನು ಬಹಿರಂಗಪಡಿಸುವ ಅಗತ್ಯವಿಲ್ಲ. ಏಳು ರಾಜಕೀಯ ಪಕ್ಷಗಳಿಗೆ ಈ ಆರು ಟ್ರಸ್ಟ್‌ಗಳು ₹105 ಕೋಟಿ ಮತ್ತು ಮತ್ತೊಂದು ಟ್ರಸ್ಟ್‌ ₹131.65 ಕೋಟಿ ದೇಣಿಗೆ ನೀಡಿವೆ.

ಈ ಟ್ರಸ್ಟ್‌ಗಳಿಗೆ ದೇಣಿಗೆ ನೀಡಿದ ದಾನಿಗಳ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗಿದೆ. ಕೇವಲ ಇಬ್ಬರು ಮಾತ್ರ ವೈಯಕ್ತಿಕ ದೇಣಿಗೆ ನೀಡಿದ್ದಾರೆ. ಉಳಿದ ಹಣವನ್ನು ಉದ್ಯಮ ಸಂಸ್ಥೆಗಳು ನೀಡಿವೆ ಎಂದು ಎಡಿಆರ್‌ ವರದಿ ಉಲ್ಲೇಖಿಸಿದೆ.

ತೆರಿಗೆ ವಿನಾಯ್ತಿ ಪಡೆಯಲು ಮತ್ತು ವಿದೇಶಿ ಬ್ಯಾಂಕ್‌ಗಳಲ್ಲಿರುವ ಕಪ್ಪುಹಣವನ್ನು ಸಕ್ರಮಗೊಳಿಸಲು ಟ್ರಸ್ಟ್‌ ನೆರವು ಪಡೆಯುವ ಗುಮಾನಿಯನ್ನು ಎಡಿಆರ್‌ ವ್ಯಕ್ತಪಡಿಸಿದೆ. ಚುನಾವಣಾ ನಿಧಿ ಸ್ಥಾಪಿಸುವ ಬಹುತೇಕ ಕಾರ್ಪೊರೇಟ್‌ ಸಂಸ್ಥೆಗಳು ನಿಧಿಗಳ ಹಿಂದೆ ಮೂಲ ಸಂಸ್ಥೆಯ ಹೆಸರು ನಮೂದಿಸಬೇಕು ಎಂದು ಎಡಿಆರ್‌ ಸಲಹೆ ಮಾಡಿದೆ.

**

ಕಂಪನಿಗಳಿಂದ ನೋಟಿನ ಸುರಿಮಳೆ

ಭಾರ್ತಿ ಏರ್‌ಟೆಲ್‌, ಡಿಎಲ್‌ಎಫ್‌ನಂತಹಹಲವು ಪ್ರತಿಷ್ಠಿತ ಕಾರ್ಪೊರೇಟ್‌ ಕಂಪನಿಗಳು ರಾಜಕೀಯ ಪಕ್ಷಗಳ ಬಹು ಮುಖ್ಯಆರ್ಥಿಕ ಸಂಪನ್ಮೂಲ ಕ್ರೋಡೀಕರಣಕೇಂದ್ರಗಳು ಎನ್ನುವುದುಬಹಿರಂಗವಾಗಿದೆ.

ಹಲವು ಪ್ರತಿಷ್ಠಿತ ಕಟ್ಟಡ ನಿರ್ಮಾಣ ಸಂಸ್ಥೆಗಳು, ರಿಯಲ್‌ ಎಸ್ಟೇಟ್‌ ಮತ್ತು ಟೆಲಿಕಾಂ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆಅಪಾರ ಪ್ರಮಾಣದ ದೇಣಿಗೆ ನೀಡಿವೆ.

ಮೂರು ಕಂಪನಿಗಳಿಂದ ಬಿಜೆಪಿಯು ₹167.80 ಕೋಟಿ ಹಣ ಸಂಗ್ರಹಿಸಿದೆ. ಬಿಜೆಡಿ ಎರಡು ಕಂಪನಿಗಳಿಂದ ₹13 ಕೋಟಿ ಮೊತ್ತ ಕ್ರೋಡೀಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT