ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಂದ್ರಬಾಬುಗೆ ಎ.ಸಿ ಕೊಠಡಿ: ಕೋರ್ಟ್‌ ಅನುಮತಿ

Published 14 ಅಕ್ಟೋಬರ್ 2023, 20:49 IST
Last Updated 14 ಅಕ್ಟೋಬರ್ 2023, 20:49 IST
ಅಕ್ಷರ ಗಾತ್ರ

ರಾಜಮಹೇಂದ್ರವರಂ: ಆಂಧ್ರಪ್ರದೇಶದ ರಾಜಮಹೇಂದ್ರವರಂ ಕಾರಾಗೃಹದಲ್ಲಿರುವ ಟಿಡಿಪಿ ಮುಖ್ಯಸ್ಥ ಎನ್‌. ಚಂದ್ರಬಾಬು ನಾಯ್ಡು ಅವರಿಗೆ ಹವಾನಿಯಂತ್ರಿತ ಕೊಠಡಿ ವ್ಯವಸ್ಥೆ ಕಲ್ಪಿಸಲು ವಿಜಯವಾಡದ ಎಸಿಬಿ ನ್ಯಾಯಾಲಯವು ಶನಿವಾರ ಅನುಮತಿ ನೀಡಿದೆ. 

ಕೌಶಲ ಅಭಿವೃದ್ಧಿ ನಿಗಮದ ₹300 ಕೋಟಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಚಂದ್ರಬಾಬು ಅವರು, ಸದ್ಯ ನ್ಯಾಯಾಂಗ ವಶದಲ್ಲಿದ್ದಾರೆ.

ಬೆಳಿಗ್ಗೆ ಸರ್ಕಾರಿ ಆಸ್ಪತ್ರೆಯ ವೈದ್ಯರ ತಂಡವು, ಮಾಜಿ ಮುಖ್ಯಮಂತ್ರಿ ಅವರ ಆರೋಗ್ಯ ತಪಾಸಣೆ ನಡೆಸಿತ್ತು. ಚಂದ್ರಬಾಬು ಅವರ ಆರೋಗ್ಯ ಸ್ಥಿರವಾಗಿದೆ. ಹಾಗಾಗಿ, ಅವರನ್ನು ಆಸ್ಪತ್ರೆಗೆ ದಾಖಲಿಸುವ ಅಗತ್ಯವಿಲ್ಲ. ಆದರೆ, ಅವರ ವಾಸ್ತವ್ಯಕ್ಕೆ ತಂಪಾದ ವಾತಾವರಣ ಕಲ್ಪಿಸಬೇಕಿದೆ ಎಂದು ಶಿಫಾರಸು ಮಾಡಿತ್ತು.

ವೈದ್ಯರ ಈ ಶಿಫಾರಸು ವರದಿ ಆಧರಿಸಿ ಚಂದ್ರಬಾಬು ಪರ ವಕೀಲರ ತಂಡವು ಕೋರ್ಟ್‌ ಮೊರೆ ಹೋಗಿತ್ತು.

‘ಚರ್ಮದ ಅಲರ್ಜಿ ಸಮಸ್ಯೆಯಿಂದ ಅವರು ಬಳಲುತ್ತಿದ್ದಾರೆ. ಹಾಗಾಗಿ, ಕಾರಾಗೃಹದಲ್ಲಿರುವ ಅವರ ಕೊಠಡಿಗೆ ಹವಾನಿಯಂತ್ರಿತ ವ್ಯವಸ್ಥೆ ಕಲ್ಪಿಸಬೇಕು’ ಎಂದು ಕೋರಿದ್ದ ಅರ್ಜಿಯನ್ನು ನ್ಯಾಯಾಲಯವು ಪುರಸ್ಕರಿಸಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT