ಪಣಜಿ: ಹೆಚ್ಚು ಸಾಂಕ್ರಾಮಿಕ ಎಂದು ಪರಿಗಣಿಸಿರುವ ಕೋವಿಡ್‌ನ ಇನ್ನೊಂದು ರೂಪಾಂತರಿತ ತಳಿ ‘ಡೆಲ್ಟ್ ಪ್ಲಸ್’ ಸೋಂಕು ಪ್ರಕರಣಗಳು ಮಹಾರಾಷ್ಟ್ರದಲ್ಲಿ ಕಂಡು ಬಂದಿದ್ದು, ಗಡಿಯಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ ಎಂದು ಗೋವಾ ಸರ್ಕಾರ ಹೇಳಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ‘ಗೋವಾದಲ್ಲಿ ‘ಡೆಲ್ಟಾ’ ರೂಪಾಂತರದ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಆದರೆ, ಇದುವರೆಗೆ ‘ಡೆಲ್ಟಾ ಪ್ಲಸ್’ ರೂಪಾಂತರ ತಳಿಯ ಪ್ರಕರಣಗಳು ಕಂಡುಬಂದಿಲ್ಲ’ ಎಂದು ಹೇಳಿದರು.

ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ‘ಡೆಲ್ಟಾ ಪ್ಲಸ್’ ರೂಪಾಂತರ ತಳಿ ಪತ್ತೆಯಾಗಿರುವುದಿಂದ ಗೋವಾದ ಗಡಿಯುದ್ದಕ್ಕೂ ಕಣ್ಗಾವಲು ಹೆಚ್ಚಿಸಲಾಗಿದೆ’ ಎಂದು ತಿಳಿಸಿದರು.

ಹೊರ ರಾಜ್ಯಗಳಿಂದ ಗೋವಾಕ್ಕೆ ಬಂದವರಲ್ಲಿ ಸೋಂಕು ಕಾಣಿಸಿಕೊಂಡರೆ ಕೂಡಲೇ ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಿ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ ಎಂದು ಸಾವಂತ್ ಹೇಳಿದರು.

ಗೋವಾದಲ್ಲಿ ಮಂಗಳವಾರ 303 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 11 ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ 1,64,957 ಪ್ರಕರಣಗಳು ವರದಿಯಾಗಿದ್ದು, 3,008 ಮಂದಿ ಸಾವಿಗೀಡಾಗಿದ್ದಾರೆ.

ಮಹಾರಾಷ್ಟ್ರದಲ್ಲಿ 21 ‘ಡೆಲ್ಟಾ ಪ್ಲಸ್’ ಪ್ರಕರಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ 40 ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಇದನ್ನೂ ಓದಿ... ‘ಡೆಲ್ಟಾ ಪ್ಲಸ್’ ರೂಪಾಂತರಿತ ತಳಿ: ದೇಶದಲ್ಲಿ 40 ಪ್ರಕರಣ ದೃಢ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.