ನವದೆಹಲಿ: ಕೋವಿಡ್-19 ಲಸಿಕೆ ವಿತರಣೆ ಮತ್ತು ಸಾಂಕ್ರಾಮಿಕ ರೋಗದ ಪರಿಸ್ಥಿತಿಯನ್ನು ಅವಲೋಕಿಸುವುದಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರದಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.

ದೇಶದ್ಯಾಂತ ಕೋವಿಡ್-19 ಲಸಿಕೆ ವಿತರಣೆ ನಡೆಸಲು ಸಿದ್ಧತೆ ಭರದಿಂದ ಸಾಗುತ್ತಿರುವಂತೆಯೇ ಕಳೆದ 24 ತಾಸಿನಲ್ಲಿ ಹೊಸತಾಗಿ 18,222 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಇದರೊಂದಿಗೆ ದೇಶದಲ್ಲಿ ಕೋವಿಡ್-19 ಸೋಂಕಿತರ ಒಟ್ಟು ಸಂಖ್ಯೆ 1,04,31,639ಕ್ಕೆ ಏರಿಕೆಯಾಗಿದೆ.

ಕಳೆದ 24 ತಾಸಿನಲ್ಲಿ 19,253 ಮಂದಿ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಚೇತರಿಸಿಕೊಂಡಿರುವ ಸಂಖ್ಯೆ 1,00,56,651ಕ್ಕೆ ಏರಿಕೆಯಾಗಿದೆ.

ಅಂದ ಹಾಗೆ ದೇಶದಲ್ಲಿ 2,24,190 ಸಕ್ರಿಯ ಪ್ರಕರಣಗಳು ಕಂಡುಬಂದಿದೆ.

ಅಂತೆಯೇ ಕಳೆದೊಂದು ದಿನದಲ್ಲಿ 228 ಮಂದಿ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 1,50,768ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ:ಸೋಮವಾರ ಸಿ.ಎಂಗಳ ಜತೆ ಮೋದಿ ಮಾತುಕತೆ

ಕೊರೊನಾ ವೈರಸ್ ಪಟ್ಟಿ ಇಂತಿದೆ:
ಒಟ್ಟು ಪ್ರಕರಣ: 1,04,31,639
ಗುಣಮುಖ: 1,00,56,651
ಸಕ್ರಿಯ ಪ್ರಕರಣ: 2,24,190
ಮರಣ: 1,50,798

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.