ಹೈದರಾಬಾದ್: ಕೋವಿಡ್–19ರ ಮೂರನೇ ಅಲೆಯು ಜುಲೈ 4ರಂದೇ ಆರಂಭವಾಗಿರಬಹುದು ಎಂದು ಹೈದರಾಬಾದ್‌ನ ಹಿರಿಯ ವಿಜ್ಞಾನಿ ಡಾ.ವಿಪಿನ್ ಶ್ರೀವಾತ್ಸವ ಹೇಳಿದ್ದಾರೆ.

ಕಳೆದ 463 ದಿನಗಳಲ್ಲಿ ವರದಿಯಾದ ಕೋವಿಡ್ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯನ್ನು ವಿಶ್ಲೇಷಿಸಿರುವ ಅವರು, ಈ ವರ್ಷದ ಫೆಬ್ರುವರಿ ಮೊದಲ ವಾರದ ಕೊನೆಯಲ್ಲಿ ಅಂದರೆ ಎರಡನೇ ಅಲೆ ಆರಂಭದ ಸ್ಥಿತಿಯೇ ಜುಲೈ 4ರ ಸಂದರ್ಭದಲ್ಲೂ ಗೋಚರಿಸಿದ್ದನ್ನು ಪ್ರಸ್ತಾಪಿಸಿದ್ದಾರೆ.

ಆ ಸಂದರ್ಭದಲ್ಲಿ ಕೋವಿಡ್ ಸಂಕಟ ಮುಗಿದು ಹೋಯಿತು ಎಂದೇ ಭಾವಿಸಲಾಗಿತ್ತು. ಆದರೆ, ಅದು ಎರಡನೇ ಅಲೆಯ ಆರಂಭವಾಗಿತ್ತು ಎಂದಿರುವ ಅವರು, ಇದೀಗಅಂಥದೇ ವರ್ತನೆ ಕಾಣಿಸಿಕೊಂಡ ಜುಲೈ 4ರಂದು ಮೂರನೇ ಅಲೆ ಆರಂಭವಾಗಿರುವ ಸೂಚನೆಯನ್ನು ನೀಡಿದ್ದಾರೆ.

ಸಾರ್ವಜನಿಕರು ಹಾಗೂ ಸರ್ಕಾರ ಈ ಬಗ್ಗೆ ತೀವ್ರ ಎಚ್ಚರಿಕೆ ವಹಿಸಬೇಕಿದ್ದು, ಹೊಸ ಅಲೆಯನ್ನು ಹೆಚ್ಚು ಜಾಗ್ರತೆಯಿಂದ ಎದುರಿಸಬೇಕಿದೆ ಎಂದು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.