ನವದೆಹಲಿ: ದೇಶದಲ್ಲಿ ಕೋವಿಡ್-19 ಮೂರನೇ ಅಲೆಯು ಆಗಸ್ಟ್ ಅಂತ್ಯದ ವೇಳೆಗೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ಅದು ಎರಡನೇ ಅಲೆಯಷ್ಟು ತೀವ್ರವಾಗಿ ಇರುವುದಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.

ಕೋವಿಡ್ ಪ್ರಕರಣಗಳ ಏರಿಕೆಯ ಬಗ್ಗೆಸಂದರ್ಶನವೊಂದರಲ್ಲಿಮಾತನಾಡಿರುವ ಐಸಿಎಂಆರ್‌ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸಮೀರನ್ ಪಂಡಾ, ʼಮೂರನೇ ಅಲೆಯು ದೇಶವ್ಯಾಪಿ ಇರಲಿದೆ. ಆದರೆ, ಎರಡನೇ ಅಲೆಯಷ್ಟು ತೀವ್ರವಾಗಿ ಇರುವುದಿಲ್ಲʼ ಎಂದು ತಿಳಿಸಿದ್ದಾರೆ.

ಕೊರೊನಾವೈರಸ್‌ನ ರೂಪಾಂತರ ತಳಿಯಾದ ʼಡೆಲ್ಟಾʼ ಸೋಂಕು ಪ್ರಕರಣಗಳು ಪ್ರಪಂಚದಾದ್ಯಂತ ಹೆಚ್ಚುತ್ತಿವೆ ಎಂದುವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮುಖ್ಯಸ್ಥ ಟೆಡ್ರೊಸ್ ಗೆಬ್ರೇಷಿಯಸ್ ಕಳವಳ ವ್ಯಕ್ತಪಡಿಸಿದ್ದರು.ಹಾಗೆಯೇ,ಜಗತ್ತು ಕೋವಿಡ್ ಮೂರನೇ ಅಲೆಯಪ್ರಾಥಮಿಕ ಹಂತದಲ್ಲಿದೆ ಎಂದು ಎಚ್ಚರಿಸಿದ್ದರು.

ಮುಂದುವರಿದು, 'ಡೆಲ್ಟಾ ರೂಪಾಂತರ ಸೋಂಕಿನಿಂದ, ಸಾರ್ವಜನಿಕ ಆರೋಗ್ಯ ಪರಿಸ್ಥಿತಿ ತೀರಾ ಹದಗೆಡುತ್ತಿದೆ. ಜನರ ಜೀವ, ಜೀವನೋಪಾಯ ಮತ್ತು ಜಾಗತಿಕ ಆರ್ಥಿಕ ಚೇತರಿಕೆ ಮೇಲೂ ಪರಿಣಾಮ ಉಂಟಾಗುತ್ತಿದೆ. ಕಡಿಮೆ ಪ್ರಮಾಣದಲ್ಲಿ ಕೋವಿಡ್ ಲಸಿಕೆ ನೀಡಿರುವ ರಾಷ್ಟ್ರಗಳಲ್ಲಿ ಆರೋಗ್ಯ ಪರಿಸ್ಥಿತಿ ಇನ್ನೂ ಭೀಕರವಾಗಿದೆ. ಆದರೆ, ಯಾವ ದೇಶದಲ್ಲೂ ಸಾಂಕ್ರಾಮಿಕ ರೋಗ ಪರಿಪೂರ್ಣವಾಗಿ ನಿವಾರಣೆಯಾಗಿಲ್ಲ. ಈ ಸಾಂಕ್ರಾಮಿಕವನ್ನು ಸಂಪೂರ್ಣವಾಗಿ ತೊಡೆದು ಹಾಕಲು ಇಡೀ ವಿಶ್ವವೇ ಒಟ್ಟಾಗಿ ಹೋರಾಟ ಮಾಡಬೇಕು’ ಎಂದು ಕರೆ ನೀಡಿದ್ದರು.

ದೇಶದಲ್ಲಿ ಕೋವಿಡ್
ದೇಶದಾದ್ಯಂತ ಕಳೆದ24 ಗಂಟೆಗಳಲ್ಲಿ 38,949ಹೊಸ ಪ್ರಕರಣಗಳು ವರದಿಯಾಗಿವೆ. ಇದೇ ವೇಳೆ 542 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇದರೊಂದಿಗೆ ದೇಶದಲ್ಲಿ ಪತ್ತೆಯಾದ ಒಟ್ಟು ಪ್ರಕರಣಗಳ ಸಂಖ್ಯೆ 3,10,26,829ಗೆ ತಲುಪಿದ್ದು, ಸಾವಿನ ಸಂಖ್ಯೆ 4,12,531ಕ್ಕೆ ತಲುಪಿದೆ. 3,01,83,876ಸೋಂಕಿತರು ಗುಣಮುಖರಾಗಿದ್ದು, ಇನ್ನೂ4,30,422 ಸಕ್ರಿಯ ಪ್ರಕರಣಗಳಿವೆ.

ಇನ್ನಷ್ಟು ಸುದ್ದಿಗಳು
*Coronavirus| ಮತ್ತಷ್ಟು ರೂಪಾಂತರಗಳು ಸೃಷ್ಟಿಯಾಗಿ ಪ್ರಬಲವಾಗುವ ಆತಂಕ: WHO
*ಜಾಗತಿಕವಾಗಿ ಮತ್ತೆ ಕೊರೊನಾ ಸೋಂಕು, ಸಾವಿನ ಪ್ರಕರಣಗಳಲ್ಲಿ ಏರಿಕೆ: WHO ಎಚ್ಚರಿಕೆ
*ವಿಶ್ವದ 104 ರಾಷ್ಟ್ರಗಳಲ್ಲಿ ವ್ಯಾಪಿಸಿರುವ ಡೆಲ್ಟಾ ತಳಿ: ಡಬ್ಲ್ಯುಎಚ್‌ಒ ಆತಂಕ
*ಸಾಂಕ್ರಾಮಿಕ ರೋಗವಿನ್ನು ತಗ್ಗಿಲ್ಲ: ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಎಚ್ಚರಿಕೆ
*ಹಲವು ರಾಷ್ಟ್ರಗಳು ಕೋವಿಡ್ ಲಸಿಕೆ ನೀಡುವಲ್ಲಿ ವಿಫಲ: ಡಬ್ಲ್ಯುಎಚ್‌ಒ ಕಳವಳ
*85 ದೇಶಗಳಲ್ಲಿ ಕಂಡಿರುವ ಡೆಲ್ಟಾ ಪ್ರಬಲ ವಂಶಾವಳಿಯಾಗುವ ಸಾಧ್ಯತೆ: ಡಬ್ಲ್ಯುಎಚ್‌ಒ
*ಡೆಲ್ಟಾ ರೂಪಾಂತರ ತಳಿ ಹೆಚ್ಚು ವೇಗವಾಗಿ ಹರಡುತ್ತದೆ: ವಿಶ್ವ ಆರೋಗ್ಯ ಸಂಸ್ಥೆ
*ಉತ್ತರ ಕೊರಿಯಾ: ಒಂದೂ ಕೋವಿಡ್ ಸೋಂಕು ಪತ್ತೆಯಾಗಿಲ್ಲ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.