ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 India Updates: ಮಹಾರಾಷ್ಟ್ರದಲ್ಲಿ ಒಂದೇ ದಿನ 152 ಮಂದಿ ಸಾವು

ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೆಬ್‌ಸೈಟ್ ಮಾಹಿತಿ ಪ್ರಕಾರ ದೇಶದಲ್ಲಿರುವ ಪ್ರಕರಣಗಳ ಸಂಖ್ಯೆ 137448, ಇಲ್ಲಿಯವರೆಗೆ 141028 ಮಂದಿ ಚೇತರಿಸಿಕೊಂಡಿದ್ದು ಸಾವಿಗೀಡಾದವರ ಸಂಖ್ಯೆ 8102 ಆಗಿದೆ.

ಮಹಾರಾಷ್ಟ್ರದಲ್ಲಿ ಕೋವಿಡ್-19 ರೋಗಿಗಳ ಸಂಖ್ಯೆ ಲಕ್ಷಕ್ಕೆ ಹತ್ತಿರವಾಗಿದೆ. ಗುರುವಾರದ ಅಂಕಿಅಂಶಗಳ ಪ್ರಕಾರ ಇಲ್ಲಿ 152 ಮಂದಿ ಸಾವಿಗೀಡಾಗಿದ್ದಾರೆ. ಒಟ್ಟು 3,607 ಹೊಸ ಪ್ರಕರಣಗಳು ವರದಿಯಾಗಿದ್ದು, ಪ್ರಕರಣಗಳ ಸಂಖ್ಯೆ 97648 ಆಗಿದೆ. ಇಲ್ಲಿವರೆಗೆ 3,590 ಮಂದಿ ಸಾವಿಗೀಡಾಗಿದ್ದಾರೆ.

ಮಧ್ಯ ಪ್ರದೇಶದಲ್ಲಿ ಇವತ್ತು 192 ಹೊಸ ಪ್ರಕರಣಗಳು ವರದಿಯಾಗಿದ್ದು 4 ಮಂದಿ ಸಾವಿಗೀಡಾಗಿದ್ದರು.ಒಟ್ಟು 10241 ಮಂದಿಗೆ ಸೋಂಕು ತಗಲಿದ್ದು ಈವರೆಗೆ 431 ಮಂದಿ ಸಾವಿಗೀಡಾಗಿದ್ದಾರೆ ರಾಜ್ಯ ಆರೋಗ್ಯ ಇಲಾಖೆ ಹೇಳಿದೆ.

ಮುಂಬೈಯಲ್ಲಿ ಇಂದು 97 ಮಂದಿ ಸಾವಿಗೀಡಾಗಿದ್ದಾರೆ. 1540 ಹೊಸ ಪ್ರಕರಣಗಳು ವರದಿ ಆಗಿದ್ದು ಪ್ರಕರಣಗಳು 53,985 ಆಗಿದೆ ಎಂದು ಗ್ರೇಟರ್ ಮುಂಬೈ ನಗರ ಪಾಲಿಕೆ ಹೇಳಿದೆ.

ದೆಹಲಿಯಲ್ಲಿಂದು 1877 ಪ್ರಕರಣಗಳು ವರದಿಯಾಗಿದ್ದು ಅತೀ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. 101 ಮಂದಿ ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 1000 ದಾಟಿದೆ. 20,000 ಕ್ಕಿಂತಲೂ ಹೆಚ್ಚು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜಸ್ಥಾನದಲ್ಲಿ 6 ಮಂದಿ ಸಾವಿಗೀಡಾಗಿದ್ದು 238 ಹೊಸ ಪ್ರಕರಣಗಳು ವರದಿಯಾಗಿವೆ. ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 11,838 ಆಗಿದೆ ಎಂದು ರಾಜಸ್ಥಾನದ ಆರೋಗ್ಯ ಇಲಾಖೆ ಹೇಳಿದೆ.

ಹರಿಯಾಣದಲ್ಲಿ 389 ಹೊಸ ಪ್ರಕರಣಗಳು ವರದಿ ಆಗಿದ್ದು 12 ಮಂದಿ ಗುರುವಾರ ಸಾವಿಗೀಡಾಗಿದ್ದಾರೆ. ಸೋಂಕಿತರ ಸಂಖ್ಯೆ 5968 ಆಗಿದ್ದು ಇಲ್ಲಿಯವರೆಗೆ 64 ಮಂದಿ ಸಾವಿಗೀಡಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ.

ದೆಹಲಿಯಲ್ಲಿ 65 ಮಂದಿ ಸಾವಿಗೀಡಾಗಿದ್ದಾರೆ, 1877 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 34687 ಆಗಿದೆ. ಇಲ್ಲಿಯವರೆಗೆ 1,085 ಮಂದಿ ಸಾವಿಗೀಡಾಗಿದ್ದಾರೆ ಎಂದು ದೆಹಲಿ ಆರೋಗ್ಯ ಇಲಾಖೆ ಹೇಳಿದೆ.

ಪಶ್ಚಿಮ ಬಂಗಾಳದಲ್ಲಿ 10 ಮಂದಿ ಸಾವಿಗೀಡಾಗಿದ್ದು 440 ಹೊಸ ಪ್ರಕರಣಗಳು ವರದಿಯಾಗಿವೆ. ಇಲ್ಲಿ ಒಟ್ಟು9,768 ಮಂದಿ ಸೋಂಕಿತರಿದ್ದಾರೆ, ಈವರೆಗೆ ಸಾವಿಗೀಡಾದವರ ಸಂಖ್ಯೆ 442 ಆಗಿದೆ.

ಕರ್ನಾಟಕದಲ್ಲಿ ಇದುವರೆಗೂ ಒಟ್ಟು 6,041 ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿದ್ದು, 69 ಜನರು ಮೃತಪಟ್ಟಿದ್ದಾರೆ. 3,110 ಸಕ್ರಿಯ ಪ್ರಕರಣಗಳಿದ್ದು, 2,862 ಜನರು ಗುಣಮುಖರಾಗಿದ್ದಾರೆ.

ತಮಿಳುನಾಡಿನಲ್ಲಿ 36,841 ಮಂದಿಗೆ ಸೋಂಕು ತಗುಲಿದ್ದು,17,182 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ 326 ಮಂದಿ ಮೃತಪಟ್ಟಿದ್ದು, 19,333 ಜನ ಗುಣಮುಖರಾಗಿದ್ದಾರೆ. ಗುಜರಾತ್‌ನಲ್ಲಿ 21,521 ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ. ಸದ್ಯ 5,439 ಸಕ್ರಿಯ ಪ್ರಕರಣಗಳಿದ್ದು, 14,735 ಮಂದಿ ಗುಣಮುಖರಾಗಿದ್ದಾರೆ. 1,347 ಜನರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT