ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿರುವ 3,600 ಬ್ರಿಟಿಷ್‌ ನಾಗರಿಕರ ಕರೆದೊಯ್ಯಲು ಬರಲಿವೆ 14 ಹೊಸ ವಿಮಾನಗಳು

Last Updated 24 ಏಪ್ರಿಲ್ 2020, 2:07 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್‌ ನಿಯಂತ್ರಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಲಾಕ್‌ಡೌನ್‌ ಜಾರಿಯಾಗಿರುವುದರಿಂದ ಸ್ವರಾಷ್ಟ್ರಕ್ಕೆ ಮರಳು ಸಾಧ್ಯವಾಗದೆ ಭಾರತದಲ್ಲಿಯೇ ಉಳಿದು ಕೊಂಡಿರುವ ಬ್ರಿಟಿಷ್‌ ನಾಗರಿಕರನ್ನು ಕರೆದೊಯ್ಯಲು ಅಲ್ಲಿನ ಸರ್ಕಾರ ವಿಶೇಷ ವಿಮಾನಗಳ ವ್ಯವಸ್ಥೆ ಮಾಡಿದೆ. 3,600 ಬ್ರಿಟಿಷ್‌ ಪ್ರವಾಸಿಗರನ್ನು ತಾಯ್ನಾಡಿಗೆ ಕರೆಸಿಕೊಳ್ಳಲು ಹೆಚ್ಚುವರಿಯಾಗಿ 14 ವಿಶೇಷ ವಿಮಾನಗಳನ್ನು (ಚಾರ್ಟರ್‌ ಫ್ಲೈಟ್ಸ್‌) ಕಳುಹಿಸಲಿದೆ.

ಭಾರತದಲ್ಲಿರುವ ಎಲ್ಲ ಬ್ರಿಟಿಷ್‌ ನಾಗರಿಕರಿಗೂ ಮರಳಿ ಬರಲು ಅನುವಾಗುವ ನಿಟ್ಟಿನಲ್ಲಿ ನಿರಂತರ ಕಾರ್ಯ ನಡೆಸಲಾಗುತ್ತಿದ್ದೆ. ಏಪ್ರಿಲ್‌ 28ರಂದು ಹೊರಡಲಿರುವ 14 ಹೆಚ್ಚುವರಿ ವಿಮಾನಗಳು ಸೇರಿದಂತೆ ಬ್ರಿಟನ್ ಸರ್ಕಾರ ಒಟ್ಟು 52 ಚಾರ್ಟರ್‌ ವಿಮಾನಗಳ ವ್ಯವಸ್ಥೆ ಮಾಡಿದೆ ಎಂದು ಬ್ರಿಟನ್‌ ಸರ್ಕಾರದ ದಕ್ಷಿಣ ಏಷ್ಯಾ ಮತ್ತು ಕಾಮನ್‌ವೆಲ್ತ್‌ ರಾಜ್ಯ ಸಚಿವ ಲಾರ್ಡ್‌ ಅಹ್ಮದ್‌ ಹೇಳಿದ್ದಾರೆ.

ಭಾರತದಿಂದ ಸುಮಾರು 6,500 ಬ್ರಿಟಿಷ್‌ ನಾಗರಿಕರನ್ನು ಚಾರ್ಟರ್‌ ವಿಮಾನಗಳ ಮೂಲಕ ಈಗಾಗಲೇ ಬ್ರಿಟನ್‌ಗೆ ಹಿಂದಿರುಗಲು ನೆರವು ಕಲ್ಪಿಸಿದೆ. ಇನ್ನೂ ಭಾರತದಲ್ಲಿಯೇ ಉಳಿದಿರುವ 7,000 ಜನರನ್ನು ಮುಂದಿನ ವಾರಗಳಲ್ಲಿ ಕರೆತರಲು ಯೋಜನೆ ರೂಪಿಸಿರುವುದಾಗಿ ಬ್ರಿಟಿಷ್‌ ಹೈ ಕಮಿಷನ್‌ ಹೇಳಿದೆ.

ಭಾರತಕ್ಕೆ ಪ್ರಯಾಣಿಸಲು ಮತ್ತು ಅಲ್ಲಿಂದ ಹಿಂದಿರುಗಲು ನಿರ್ಬಂಧಗಳಿರುವುದರಿಂದ ನಾವು ಚಾರ್ಟರ್ ವಿಮಾನಗಳ ವ್ಯವಸ್ಥೆ ಮಾಡಿದ್ದೇವೆ. ಒಟ್ಟು 52 ಬ್ರಿಟಿಷ್‌ ವಿಮಾನಗಳ ಮೂಲಕ ಭಾರತದಲ್ಲಿರುವ 13,000 ಜನರು ಹಾಗೂ ಸಿಬ್ಬಂದಿಯನ್ನು ಕರೆತರಲಿದ್ದೇವೆ' ಎಂದು ಬ್ರಿಟನ್‌ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಡೊಮಿನಿಕ್‌ ರಾಬ್‌ ಹೇಳಿದ್ದಾರೆ.

ಭಾರತ ಸರ್ಕಾರದ ನಿರಂತರ ಸಹಕಾರಕ್ಕೆ ಭಾರತದಲ್ಲಿರುವ ಬ್ರಿಟನ್‌ ಹೈ ಕಮಿಷನರ್‌ ಜಾನ್ ಥಾಂಪ್ಸನ್‌ ಧನ್ಯವಾದ ಅರ್ಪಿಸಿದ್ದಾರೆ. ಬ್ರಿಟನ್‌ನಲ್ಲಿ ಸಿಲುಕಿ ಭಾರತೀಯರನ್ನು ಕರೆತರುವ ಪ್ರಯತ್ನ ಇನ್ನಷ್ಟೇ ನಡೆಯಬೇಕಿದೆ.

ಈವರೆಗೂ 18 ರಾಷ್ಟ್ರಗಳಿಂದ ಒಟ್ಟು 13,200 ಬ್ರಿಟನ್‌ ನಾಗರಿಕರು 63 ವಿಮಾನಗಳ ಮೂಲಕ ಸ್ವದೇಶಕ್ಕೆ ಮರಳಿದ್ದಾರೆ. ಅಮೃತಸರದಿಂದ ಲಂಡನ್‌ಗೆ ಏಪ್ರಿಲ್‌ 28ರಿಂದ 30 ಹಾಗೂ ಮೇ 1ರಿಂದ 4ರ ವರೆಗೂ ವಿಮಾನಗಳ ಹಾರಾಟ ನಡೆಯಲಿದೆ. ಅಹಮದಾಬಾದ್‌ನಿಂದ ಏಪ್ರಿಲ್‌ 28–29, ಮೇ 1,3,4 ಹಾಗೂ ದೆಹಲಿಯಿಂದ ಲಂಡನ್‌ಗೆ ಏಪ್ರಿಲ್‌ 30ರಂದು ವಿಮಾನಗಳು ಹಾರಾಟ ನಡೆಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT