ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ: 15 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಸಿಪಿಐಎಂ

Published 27 ಫೆಬ್ರುವರಿ 2024, 11:19 IST
Last Updated 27 ಫೆಬ್ರುವರಿ 2024, 11:19 IST
ಅಕ್ಷರ ಗಾತ್ರ

ತಿರುವನಂತಪುರ: ಕೇರಳದ 20 ಲೋಕಸಭಾ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ‘ಕಮ್ಯುಸಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ(ಮಾರ್ಕ್ಸ್‌ವಾದಿ)’ ಅಭ್ಯರ್ಥಿಗಳನ್ನು ಘೋಷಿಸಿದೆ. ಪಕ್ಷದ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್, ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದರು.

ಈ ಬಾರಿ, ಸಚಿವ ಕೆ. ರಾಧಾಕೃಷ್ಣನ್ ಸೇರಿದಂತೆ ನಾಲ್ವರು ಹಾಲಿ ಸಚಿವರನ್ನು ಸಿಪಿಐ(ಎಂ) ಕಣಕ್ಕಿಳಿಸಿದೆ. ಜತೆಗೆ ಮಾಜಿ ಸಚಿವರಾದ ಥಾಮಸ್ ಐಸಾಕ್ ಮತ್ತು ಶೈಲಜಾ ಅವರನ್ನು ಪ್ರಮುಖ ಕ್ಷೇತ್ರದಲ್ಲಿ ಕಣಕ್ಕಿಳಿಸಲು ತಯಾರಿ ನಡೆಸಿದೆ.

ಶಾಸಕರಾದ ಎ. ಮುಖೇಶ್ ಮತ್ತು ವಿ. ಜಾಯ್ ಕೂಡ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಆಯ್ಕೆಯಾಗಿದ್ದಾರೆ. ಹಾಲಿ ಸಂಸದರಾದ ಎ.ಎಂ.ಆರಿಫ್ (ಲೋಕಸಭೆ) ಮತ್ತು ಎಳಮರಮ್ ಕರೀಂ (ರಾಜ್ಯಸಭೆ) ಅಭ್ಯರ್ಥಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

2019 ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 15 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದ್ದು, ಎರಡು ಸ್ಥಾನಗಳನ್ನು ‘ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌’ ಪಡೆದುಕೊಂಡಿತ್ತು. ಸಿಪಿಐ(ಎಂ), ಕೇರಳ ಕಾಂಗ್ರೆಸ್‌ (ಎಂ), ಮತ್ತು ಆರ್‌ಎಸ್‌ಪಿ ತಲಾ 1 ಸ್ಥಾನಗಳನ್ನು ಗೆದ್ದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT