ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ತಿಕ್ ಗುಡ್ ಬೈ; ಖಚಿತಪಡಿಸಿದ ಐಪಿಎಲ್ ಪ್ರಸಾರಕರು; ಕೊಹ್ಲಿ ಜತೆ ಭಾವುಕ ಕ್ಷಣ

Published 23 ಮೇ 2024, 5:25 IST
Last Updated 23 ಮೇ 2024, 5:25 IST
ಅಕ್ಷರ ಗಾತ್ರ

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 'ಫಿನಿಶರ್' ಎಂದೇ ಖ್ಯಾತಿ ಪಡೆದಿರುವ, 'ಡಿಕೆ' ಎಂಬ ಅಚ್ಚುಮೆಚ್ಚಿನ ಹೆಸರಿನಿಂದ ಕರೆಯಲ್ಪಡುವ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್, ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗೆ ವಿದಾಯ ಹೇಳಿದ್ದಾರೆ.

ಇದನ್ನು ಐಪಿಎಲ್ ಮುಖ್ಯ ಪ್ರಸಾರಕರಾದ ಜಿಯೋ ಸಿನಿಮಾ ಖಚಿತಪಡಿಸಿದೆ. ಅಲ್ಲದೆ ಡಿಕೆ ಅವರ ಸುಂದರ ಪೋಸ್ಟ್ ಹಂಚಿಕೊಂಡಿದೆ.

ಗುರುವಾರ ಅಹಮದಾಬಾದ್‌ನಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲು ಅನುಭವಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟೂರ್ನಿಯಿಂದಲೇ ಹೊರಬಿದ್ದಿದೆ.

ಪಂದ್ಯದ ಬಳಿಕ ಪರಸ್ಪರ ತಬ್ಬಿಕೊಂಡ ಕಾರ್ತಿಕ್ ಹಾಗೂ ವಿರಾಟ್ ಕೊಹ್ಲಿ ಭಾವುಕರಾಗಿ ಕಂಡುಬಂದರು. ಕೈಯಲ್ಲಿ ಗ್ಲೌ ಹಿಡಿದು ಅಭಿಮಾನಿಗಳತ್ತ ಕೈಬೀಸಿ ಮುನ್ನಡೆದ ಡಿಕೆ, ಕೊನೆಯ ಸಲ ಆರ್‌ಸಿಬಿ ತಂಡವನ್ನು ಮುನ್ನಡೆಸಿದರು. ಈ ಸಂದರ್ಭದಲ್ಲಿ ಕೊಹ್ಲಿ ಸೇರಿದಂತೆ ಆರ್‌ಸಿಬಿ ಆಟಗಾರರು ಕೈಚಪ್ಪಾಳೆ ತಟ್ಟುತ್ತಾ ಡಿಕೆ ಅವರನ್ನು ಹಿಂಬಾಲಿಸಿದರು. ಆ ಮೂಲಕ ಕಾರ್ತಿಕ್ ಅವರಿಗೆ ಗೌರವವನ್ನು ತೋರಿದರು.

ರಾಜಸ್ಥಾನ ರಾಯಲ್ಸ್ ತಂಡದ ಆಟಗಾರರು ಸಹ ಡಿಕೆ ಅವರನ್ನು ತಬ್ಬಿಕೊಂಡು ಶುಭ ಹಾರೈಸಿದರು.

ಅಂದ ಹಾಗೆ ನಿವೃತ್ತಿ ಬಗ್ಗೆ ದಿನೇಶ್ ಕಾರ್ತಿಕ್ ಇನ್ನಷ್ಟೇ ಅಧಿಕೃತವಾಗಿ ಘೋಷಣೆ ಮಾಡಬೇಕಿದೆ.

ವಿರಾಟ್ ಕೊಹ್ಲಿ ಹಾಗೂ ದಿನೇಶ್ ಕಾರ್ತಿಕ್

ವಿರಾಟ್ ಕೊಹ್ಲಿ ಹಾಗೂ ದಿನೇಶ್ ಕಾರ್ತಿಕ್

(ಪಿಟಿಐ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT