ತಿರುವನಂತಪುರ: 2005ರಲ್ಲಿ ಕೇರಳದ ಕಣ್ಣೂರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತನ ಹತ್ಯೆ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಾಧ್ಯಮ ಕಾರ್ಯದರ್ಶಿಯ ಸಹೋದರ ಹಾಗೂ ಸಿಪಿಎಂ ಕಾರ್ಯಕರ್ತರು ಸೇರಿದಂತೆ 9 ಮಂದಿ ತಪ್ಪಿತಸ್ಥರು ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಥಲಸ್ಸೆರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ.ಟಿ ನಿಸಾರ್ ಅಹಮ್ಮದ್ ಅವರು ಶುಕ್ರವಾರ ಈ ತೀರ್ಪು ನೀಡಿದ್ದು, ಮಾ.24ರಂದು ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಗುವುದು.

ಎಳಂಬಿಯಾಲಿ ಸೂರಜ್ ಅವರು ಸಿಪಿಎಂ ತೊರೆದು ಬಿಜೆಪಿ ಸೇರಿದ ಕಾರಣ ರಾಜಕೀಯ ದ್ವೇಷದಿಂದ ಅವರನ್ನು ಆ.7 2005ರಂದು ಹತ್ಯೆ ಮಾಡಲಾಯಿತು.

9 ಮಂದಿ ತಪ್ಪಿತಸ್ಥರಲ್ಲಿ ಒಬ್ಬರಾಗಿರುವ ಟಿ.ಕೆ ರಾಜೇಶ್, 2012ರಲ್ಲಿ ನಡೆದ ಸಿಪಿಎಂ ನಾಯಕ ಟಿ.ಪಿ ಚಂದ್ರಶೇಖರನ್ ಅವರ ಹತ್ಯೆ ಪ್ರಕರಣದ ಅಪರಾಧಿಯೂ ಆಗಿದ್ದಾರೆ.

ಪ್ರಕರಣದ ವಿಚಾರಣೆ ಅವಧಿಯಲ್ಲಿ ಇಬ್ಬರು ಆರೋಪಿಗಳು ಮೃತಪಟ್ಟಿದ್ದು, ಒಬ್ಬ ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.