ದುಬೈ: ಭಾರತದ ಸ್ಟಾರ್ ಕ್ರಿಕೆಟಿಗರಾದ ಶುಭಮನ್ ಗಿಲ್, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ಏಕದಿನ ಮಾದರಿಯ ಬ್ಯಾಟರ್ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ ಐದರೊಳಗೆ ಮುಂದುವರಿದಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ, ಗಿಲ್ ಮೊದಲ ಸ್ಥಾನದಲ್ಲಿದ್ದರೆ, ರೋಹಿತ್ ಎರಡನೇ ಸ್ಥಾನದಲ್ಲಿದ್ದಾರೆ. 736 ಪಾಯಿಂಟ್ ಹೊಂದಿರುವ ವಿರಾಟ್ 4ನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನ ಪ್ರಮುಖ ಬ್ಯಾಟರ್ ಬಾಬರ್ ಅಜಂ ಕೊಹ್ಲಿಗಿಂತ ಮೇಲಿದ್ದಾರೆ. ನ್ಯೂಜಿಲೆಂಡ್ನ ಡೆರಿಲ್ ಮಿಚೆಲ್ ಐದರಲ್ಲಿ ಕಾಣಿಸಿಕೊಂಡಿದ್ದಾರೆ.

ಬೌಲರ್ಗಳ ವಿಭಾಗದಲ್ಲಿ ಕುಲದೀಪ್ ಯಾದವ್ ಹಾಗೂ ರವೀಂದ್ರ ಜಡೇಜ, ಅಗ್ರ ಹತ್ತರಲ್ಲಿ ಸ್ಥಾನ ಪಡೆದಿರುವ ಭಾರತೀಯರು. ಯಾದವ್ (650) 3ನೇ ಸ್ಥಾನದಲ್ಲಿದ್ದರೆ, ಜಡೇಜ (616) 9ನೇ ಕ್ರಮಾಂಕದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಕೇಶವ ಮಹರಾಜ್ ಮತ್ತು ಶ್ರೀಲಂಕಾದ ಮಹೀಶ ತೀಕ್ಷಣ ತಲಾ 671 ಪಾಯಿಂಟ್ಗಳನ್ನು ಹೊಂದಿದ್ದು, ಈ ವಿಭಾಗದಲ್ಲಿ ಮೊದಲೆರಡು ಸ್ಥಾನಗಳಲ್ಲಿದ್ದಾರೆ.
.Maharaja Trophy | ಇಂದು ಫೈನಲ್: ಪ್ರಶಸ್ತಿಗಾಗಿ ಹುಬ್ಬಳ್ಳಿ, ಮಂಗಳೂರು ಸೆಣಸಾಟ.ಚರ್ಮದ ಕ್ಯಾನ್ಸರ್ನೊಂದಿಗೆ ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಹೋರಾಟ.
ಟೆಸ್ಟ್ ಮತ್ತು ಟಿ20 ಕ್ರಿಕೆಟ್ಗೆ ಈಗಾಗಲೇ ವಿದಾಯ ಹೇಳಿರುವ ರೋಹಿತ್, ಕೊಹ್ಲಿ ಏಕದಿನ ಮಾದರಿಯಲ್ಲಷ್ಟೇ ಟೀಂ ಇಂಡಿಯಾವನ್ನು ಪ್ರತಿನಿಧಿಸುತ್ತಿದ್ದಾರೆ. ಇವರಿಬ್ಬರೂ, ಈ ಮಾದರಿಯಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ (ಫೆಬ್ರುವರಿಯಲ್ಲಿ) ಕೊನೇ ಸಲ ಆಡಿದ್ದರು. ಪಾಕಿಸ್ತಾನದ ಆತಿಥ್ಯದಲ್ಲಿ ಯುಎಇಯಲ್ಲಿ ನಡೆದ ಈ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗಿತ್ತು.

ಏಕದಿನ ಮಾದರಿಯ ಟಾಪ್ 5 ಆಟಗಾರರು

ಬ್ಯಾಟರ್ಗಳು

1. ಶುಭಮನ್ ಗಿಲ್ (ಭಾರತ) – 784 ಪಾಯಿಂಟ್
2. ರೋಹಿತ್ ಶರ್ಮಾ (ಭಾರತ) – 756 ಪಾಯಿಂಟ್
3. ಬಾಬರ್ ಅಜಂ (ಪಾಕಿಸ್ತಾನ) – 739 ಪಾಯಿಂಟ್
4. ವಿರಾಟ್ ಕೊಹ್ಲಿ (ಭಾರತ) – 736 ಪಾಯಿಂಟ್
5. ಡೆರಿಲ್ ಮಿಚೆಲ್ (ನ್ಯೂಜಿಲೆಂಡ್) – 720 ಪಾಯಿಂಟ್

ಬೌಲರ್ಗಳು

1. ಕೇಶವ ಮಹರಾಜ್ (ದಕ್ಷಿಣ ಆಫ್ರಿಕಾ) – 671 ಪಾಯಿಂಟ್
2. ಮಹೀಶ ತೀಕ್ಷಣ (ಶ್ರೀಲಂಕಾ) – 671 ಪಾಯಿಂಟ್
3. ಕುಲದೀಪ್ ಯಾದವ್ (ಭಾರತ) – 650 ಪಾಯಿಂಟ್
4. ಬರ್ನಾರ್ಡ್ ಸ್ಕಾಲ್ಟ್ಜ್ (ನಮೀಬಿಯಾ) – 644 ಪಾಯಿಂಟ್
5. ರಶೀದ್ ಖಾನ್ (ಅಫ್ಗಾನಿಸ್ತಾನ) – 640 ಪಾಯಿಂಟ್

ಆಲ್ರೌಂಡರ್ಗಳು

1. ಅಜ್ಮತುಲ್ಲಾ ಒಮರ್ಜಾಯ್ (ಅಫ್ಗಾನಿಸ್ತಾನ) – 296 ಪಾಯಿಂಟ್
2. ಮೊಹಮ್ಮದ್ ನಬಿ (ಅಫ್ಗಾನಿಸ್ತಾನ) – 292 ಪಾಯಿಂಟ್
3. ಸಿಕಂದರ್ ರಾಜಾ (ಜಿಂಬಾಬ್ವೆ) – 290 ಪಾಯಿಂಟ್
4. ಮೆಹದಿ ಹಸನ್ ಮಿರಾಜ್ (ಬಾಂಗ್ಲಾದೇಶ) – 249 ಪಾಯಿಂಟ್
5. ಮಿಚೇಲ್ ಬ್ರೇಸ್ವೆಲ್ (ನ್ಯೂಜಿಲೆಂಡ್) – 246 ಪಾಯಿಂಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.