ವಿಶಾಖಪಟ್ಟಣಂ: ನಾಯಕಿ ಅಲಿಸಾ ಹೀಲಿ ಅವರ ಭರ್ಜರಿ ಶತಕದ ಬಲದಿಂದ ಆಸ್ಟ್ರೇಲಿಯಾ ತಂಡವು ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಜಯದ ಓಟ ಮುಂದುವರಿಸಿತು. ಭಾರತ ತಂಡದ ವಿರುದ್ಧ 3 ವಿಕೆಟ್ಗಳಿಂದ ಗೆದ್ದಿತು.

ಆಸ್ಟ್ರೇಲಿಯಾ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸ್ಮೃತಿ ಮಂದಾನ (80; 66ಎ) ಮತ್ತು ಪ್ರತೀಕಾ ರಾವಲ್ (75; 96ಎ) ಅವರ ಶತಕದ ಜೊತೆಯಾಟದ ಬಲದಿಂದ ಭಾರತವು 48.5 ಓವರ್ಗಳಲ್ಲಿ 330 ರನ್ ಗಳಿಸಿತು.

ಟೂರ್ನಿಯ ಈ ಮೊದಲಿನ ಪಂದ್ಯ ಗಳಲ್ಲಿ ಮಧ್ಯಮ ಹಾಗೂ ಕೆಳಕ್ರಮಾಂಕದ ಬ್ಯಾಟರ್ಗಳು ಉತ್ತಮವಾಗಿ ಆಡಿದ್ದರು. ಆರಂಭಿಕರು ವೈಫಲ್ಯ ಅನುಭವಿಸಿ ದ್ದರು. ಆದರೆ ಈ ಪಂದ್ಯದಲ್ಲಿ ಆರಂಭಿಕರು ಮಿಂಚಿದರು. ಉಳಿದವರು ಸಾಧಾರಣವಾಗಿ ಆಡಿದರು.

ಆದರೆ ದೊಡ್ಡ ಮೊತ್ತ ಗಳಿಸಿದ್ದ ಕೌರ್ ಪಡೆಯ ಆತ್ಮವಿಶ್ವಾಸಕ್ಕೇ ಅಲಿಸಾ ಹೀಲಿ (142; 107ಎಸೆತ, 4X21, 6X3) ಅವರು ಪೆಟ್ಟುಕೊಟ್ಟರು. ಅವರು ಫೋಬಿ ಲಿಚ್ಫೀಲ್ಡ್ (40; 39ಎ) ಅವರೊಂದಿಗೆ ಮೊದಲ ವಿಕೆಟ್ ಜೊತೆಯಾಟದಲ್ಲಿ 85 ರನ್ ಸೇರಿಸಿದರು. ಎರಡನೇ ವಿಕೆಟ್ ಜತೆಯಾಟದಲ್ಲಿ ಎಲಿಸ್ ಪೆರಿ (ಔಟಾಗದೇ 47; 52ಎ) ಅವರೊಂದಿಗೆ 73 ರನ್ ಸೇರಿಸಿದರು. ಅಲಿಸಾ ಔಟಾದ ನಂತರ ಆ್ಯಷ್ಲೆ ಗಾರ್ಡನರ್ (45 ರನ್) ಮತ್ತು ಸೋಫಿ ಮಾಲಿನೆ (18; 19ಎ) ಅವರು ತಂಡಕ್ಕೆ ಆಸರೆಯಾದರು. ಇದರಿಂದಾಗಿ ಇನಿಂಗ್ಸ್ನಲ್ಲಿ ಇನ್ನೂ ಒಂದು ಓವರ್ ಬಾಕಿ ಇರುವಾಗಲೇ ಆಸ್ಟ್ರೇಲಿಯಾ ತಂಡವು 7 ವಿಕೆಟ್ಗಳಿಗೆ 331 ರನ್ ಗಳಿಸಿ ಜಯಿಸಿತು.

ಸ್ಮೃತಿ– ಪ್ರತೀಕಾ ಜೊತೆಯಾಟ: ಭಾರತದ ಸ್ಮೃತಿ ಮತ್ತು ಪ್ರತೀಕಾ ಅವರು ಮೊದಲ ವಿಕೆಟ್ ಜತೆಯಾಟದಲ್ಲಿ 155 ರನ್ (24.3 ಓವರ್) ಪೇರಿಸಿದರು. ಎಡಗೈ ಬ್ಯಾಟರ್ ಸ್ಮೃತಿ ಅವರು ಏಳನೇ ಓವರ್ನವರೆಗೂ ತಾಳ್ಮೆಯಿಂದ ಆಡಿದರು. ಪಿಚ್ ಸತ್ವವನ್ನು ಅರಿತುಕೊಂಡ ನಂತರ ಬೀಸಾಟ ಆರಂಭಿಸಿದರು. ಸ್ಪಿನ್ನರ್ ಸೋಫಿ ಮಾಲಿನೆ ಅವರ ಮೊದಲ ಓವರ್ನಲ್ಲಿಯೇ ಸ್ಮೃತಿ 18 ರನ್ ಸೂರೆ ಮಾಡಿದರು. ಅದರಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಇತ್ತು.

ಸ್ಮೃತಿಗೆ ಉತ್ತಮ ಜೊತೆ ನೀಡಿದ ಪ್ರತೀಕಾ ಅವರು 69 ಎಸೆತಗಳಲ್ಲಿ ತಮ್ಮ ಅರ್ಧಶತಕ ಸಾಧಿಸಿದರು.

ಶತಕ ಗಳಿಸುವ ಹಾದಿಯಲ್ಲಿದ್ದ ಸ್ಮೃತಿ ಅವರ ವಿಕೆಟ್ ಪಡೆದ ಸೋಫಿ ಮಾಲಿನೆ ಮುಯ್ಯಿ ತೀರಿಸಿ ಕೊಂಡರು. ಫೋಬಿ ಲಿಚ್ ಫೀಲ್ಡ್ ಅಮೋಘ ಕ್ಯಾಚ್ ಪಡೆದರು. ಇದಾಗಿ ಐದು ಓವರ್ಗಳ ನಂತರ ಪ್ರತೀಕಾ ಅವರೂ ಅನಾಬೆಲ್ ಸದರ್ಲೆಂಡ್ ಬೌಲಿಂಗ್ನಲ್ಲಿ ಎಲಿಸ್ ಪೆರಿಗೆ ಕ್ಯಾಚಿತ್ತರು.

ಸಂಕ್ಷಿಪ್ತ ಸ್ಕೋರು: ಭಾರತ: 48.5 ಓವರ್ಗಳಲ್ಲಿ 330 (ಪ್ರತೀಕಾ ರಾವಲ್ 75, ಸ್ಮೃತಿ ಮಂದಾನ 80, ಹರ್ಲೀನ್ ಡಿಯೊಲ್ 38, ಹರ್ಮನ್ಪ್ರೀತ್ ಕೌರ್ 22, ಜಿಮಿಮಾ ರಾಡ್ರಿಗಸ್ 33, ಸೋಫಿ ಮಾಲಿನೆ 75ಕ್ಕೆ3, ಅನಾಬೆಲ್ ಸದರ್ಲೆಂಡ್ 40ಕ್ಕೆ5) ಆಸ್ಟ್ರೇಲಿಯಾ: 49 ಓವರ್ಗಳಲ್ಲಿ 7ಕ್ಕೆ331 (ಅಲಿಸಾ ಹೀಲಿ 142, ಫೋಬಿ ಲಿಚ್ಫೀಲ್ಡ್ 40, ಎಲಿಸ್ ಪೆರಿ ಔಟಾಗದೇ 47, ಆ್ಯಷ್ಲೆ ಗಾರ್ಡನರ್ 45, ಅಮನ್ಜೋತ್ ಕೌರ್ 68ಕ್ಕೆ2, ಶ್ರೀಚರಣಿ 41ಕ್ಕೆ3, ದೀಪ್ತಿ ಶರ್ಮಾ 52ಕ್ಕೆ2) ಫಲಿತಾಂಶ:ಆಸ್ಟ್ರೇಲಿಯಾ ತಂಡಕ್ಕೆ 3 ವಿಕೆಟ್ ಜಯ

ಮಂದಾನ 5 ಸಾವಿರ ರನ್

ಸ್ಮೃತಿ ಮಂದಾನ ಅವರು ಏಕದಿನ ಕ್ರಿಕೆಟ್ನಲ್ಲಿ 5 ಸಾವಿರ ರನ್ ಗಳಿಸಿದರು. 29 ವರ್ಷದ ಸ್ಮೃತಿ ಅವರು ಅತ್ಯಂತ ವೇಗವಾಗಿ ಈ ಮೈಲಿಗಲ್ಲು ಮುಟ್ಟಿದ ಆಟಗಾರ್ತಿಯಾದರು. ಅವರು 112 ಪಂದ್ಯಗಳಲ್ಲಿ ಈ ಸಾಧನೆ ಮಾಡಿದರು.

ಸ್ಮೃತಿ ಮತ್ತು ಪ್ರತೀಕಾ ಅವರು ಆರನೇ ಬಾರಿ ಶತಕದ ಜೊತೆಯಾಟವಾಡಿದರು. ಕಳೆದ 21 ಇನಿಂಗ್ಸ್ಗಳಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಪೂರ್ಣಿಮಾ ರಾವತ್ ಮತ್ತು ಮಿಥಾಲಿ ರಾಜ್ ಅವರು ಈ ಹಿಂದೆ 34 ಇನಿಂಗ್ಸ್ಗಳಲ್ಲಿ ಏಳು ಶತಕದ ಜೊತೆಯಾಟಗಳನ್ನು ಆಡಿದ್ದರು. ಅವರ ದಾಖಲೆ ಸರಿಗಟ್ಟಲು ಸ್ಮೃತಿ ಮತ್ತು ಪ್ರತೀಕಾಗೆ ಇನ್ನೊಂದು ಜೊತೆಯಾಟದ ಅಗತ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.