ಹರಿದ್ವಾರ : ನಿರಂತರ ಮಳೆಯಿಂದಾಗಿ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ನಿರಂತರ ಮಳೆಗೆ ಅಲವಾಲ್ಪುರ್ ಗ್ರಾಮದ ಸ್ಮಶಾನವೊಂದು ಸೋಲಾನಿ ನದಿಯ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ ಎಂದು ಹೇಳಲಾಗಿದೆ.

ಸೋಲನ್ ಜಿಲ್ಲೆ ಮೂಲಕ ಹಾದು ಹೋಗುವ ಗಂಗಾ ನದಿ ನೀರು ಹೆಚ್ಚಳದಿಂದ ನದಿ ದಡದಲ್ಲಿ ವಾಸಿಸುವ ಜನರಿಗೆ ಜಾಗರೂಕರಾಗಿರಲು ಅಧಿಕಾರಿಗಳು ತಿಳಿಸಿದ್ದಾರೆ. ತಗ್ಗು ಪ್ರದೇಶಗಳ ಮನೆಗಳು, ಹೊಲಗಳು ನೀರಿನಲ್ಲಿ ಮುಳುಗುವ ಸಾಧ್ಯತೆ ಇದೆ.
.ಅಪಾಯದ ಮಟ್ಟ ತಲುಪಿದ ಗಂಗಾ ನದಿ: ಋಷಿಕೇಷದಲ್ಲಿ ರಿವರ್ ರ್ಯಾಫ್ಟಿಂಗ್ ಸ್ಥಗಿತ.
ಅಪಾಯ ಮಟ್ಟದಲ್ಲಿರುವ ಜಿಲ್ಲೆಗಳ ಬಗ್ಗೆ ಜಿಲ್ಲಾಡಳಿತದಿಂದ ಮಾಹಿತಿ ಪಡೆದು ಸುರಕ್ಷತೆಗೆ ಸೂಚಿಸಲಾಗಿದೆ ಎಂದು ನೀರಾವರಿ ಇಲಾಖೆಯ ಅಧಿಕಾರಿಯಾದ ಭರತ್ ಭೂಷಣ್ ಶರ್ಮಾ ಹೇಳಿದ್ದಾರೆ.
.ಗಂಗಾ ನದಿ ಪ್ರವಾಹ: ಪಟ್ನಾ ಗ್ರಾಮೀಣ ಪ್ರದೇಶದ 76 ಶಾಲೆಗಳು ಆ.31ರ ವರೆಗೆ ಬಂದ್.
ಹರಿದ್ವಾರದಲ್ಲಿ ಭಾರಿ ಮಳೆಯಿಂದ ನದಿಗಳು ಹಾಗೂ ಹೊಳೆಗಳು ತುಂಬಿ ಹರಿಯುತ್ತಿವೆ. ಕೆಲವು ನಗರ ಪ್ರದೇಶಗಳಲ್ಲಿ 2-3 ಅಡಿ ಎತ್ತರದಷ್ಟು ನೀರು ತುಂಬಿ ಜನ ಜೀವನ ಅಸ್ತವ್ಯಸ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.