ಠಾಣೆ: ಪತ್ನಿ ಕೊಂದ ವ್ಯಕ್ತಿಯೊಬ್ಬನಿಗೆ ಇಲ್ಲಿನ ಜಿಲ್ಲಾ ನ್ಯಾಯಾಲಯ 15 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ಗುಲಾಬ್ ದೇವರಾಮ್ ಚವಾಣ್ (28) ಶಿಕ್ಷೆಗೆ ಒಳಗಾದ ವ್ಯಕ್ತಿ. ತನ್ನನ್ನು ತವರು ಮನೆಗೆ ಕಳಿಸುತ್ತಿಲ್ಲ ಎಂದು ಪತ್ನಿ ಅನಿತಾ (22) ಪದೇಪದೇ ಗುಲಾಬ್ ಚವಾಣ್‌ನೊಂದಿಗೆ ಜಗಳ ಮಾಡುತ್ತಿದ್ದಳು.

2015ರ ನವೆಂಬರ್‌ನಲ್ಲಿ ಜಗಳವಾಡುತ್ತಿದ್ದಾಗ ಆಕೆ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡಿದ್ದಾಳೆ. ಆಗ ಗುಲಾಬ್ ಚವಾಣ್ ಸಹ ಕೋಪದಲ್ಲಿದ್ದು, ಉರಿಯುತ್ತಿದ್ದ ಬೆಂಕಿಕಡ್ಡಿಯನ್ನು ಆಕೆಯತ್ತ ಎಸೆದಿದ್ದಾನೆ.

ಸುಟ್ಟಗಾಯಗಳಿಂದಾಗಿ ಆಕೆ ಮೃತಪಟ್ಟಳು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ವಿಚಾರಣೆ ನಡಸಿದ ಸೆಷನ್ಸ್ ನ್ಯಾಯಾಧೀಶ ರಾಹುಲ್ ಆರ್.ಭೋಸಲೆ, ಚವಾಣ್‌ಗೆ ಜೈಲು ಹಾಗೂ ₹ 5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.