ನವದೆಹಲಿ: ‘ಚುನಾವಣೆಯಲ್ಲಿ ಕಪ್ಪುಹಣದ ಹಾವಳಿಗೆ ಈಗಿರುವ ಕಾನೂನು ಚೌಕಟ್ಟಿನಲ್ಲಿ ಕಡಿವಾಣ ಹಾಕುವುದು ಸಾಧ್ಯವಿಲ್ಲ’ ಎಂದು ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

‘ಚುನಾವಣೆಗಳಲ್ಲಿ ಹರಿಯುತ್ತಿರುವ ಹಣದ ಹೊಳೆ ದೊಡ್ಡ ಸಮಸ್ಯೆಯಾಗಿದೆ. ಹಣಕಾಸು ವಿಚಾರದಲ್ಲಿ ಪಾರದರ್ಶಕತೆ ತರುವ ಬಗ್ಗೆ ಬಹಳ ಚರ್ಚೆ ನಡೆಯುತ್ತಿವೆ. ಆದರೆ, ಈಗಿರುವ ಕಾನೂನು ಚೌಕಟ್ಟಿನಲ್ಲಿ ಹಣ ಬಲ ನಿಯಂತ್ರಿಸಲು ಸಾಧ್ಯವಿಲ್ಲ. ಅದಕ್ಕಾಗಿ ಸುಧಾರಣಾ ಕ್ರಮಗಳನ್ನು ತರಲು ಆಯೋಗವು ಸಲಹೆ ನೀಡಿದೆ’ ಎಂದು ಹೇಳಿದ್ದಾರೆ.

ಶನಿವಾರ ‘ಭಾರತದ ಚುನಾವಣೆಪ್ರಜಾಪ್ರಭುತ್ವಕ್ಕೆ ಸವಾಲುಗಳು’ ಕುರಿತ ವಿಚಾರಸಂಕಿರಣದಲ್ಲಿ ಮಾತನಾಡಿದ ಅವರು, ದತ್ತಾಂಶ ಕಳ್ಳತನ ಹಾಗೂ ಸುಳ್ಳುಸುದ್ದಿಗಳ ಹಾವಳಿ ಚುನಾವಣಾ ಪ್ರಕ್ರಿಯೆಗೆ ಮಾರಕವಾಗಿವೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಭುತ್ವ ಸುಗಮವಾಗಿ ನಡೆಯಲು ಧೈರ್ಯ, ನಡತೆ, ಸಮಗ್ರತೆ ಮತ್ತು ಜ್ಞಾನದ ಸಂಪತ್ತು ಅವಶ್ಯ. ಆದರೆ, ಇಂದು ಇವೆಲ್ಲವೂ ಕುಸಿತದ ಹಾದಿಯಲ್ಲಿವೆ ಎಂದು ಬೇಸರಿಸಿದರು.

ಸುಳ್ಳುಸುದ್ದಿಗಳ ಹಾವಳಿಯಿಂದ ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗಿದೆ. ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಸುಳ್ಳುಸುದ್ದಿಗಳು ಮಾರಕವಾಗಿ ಪರಿಣಮಿಸಿವೆ.

– ಒ.ಪಿ. ರಾವತ್, ಮುಖ್ಯ ಚುನಾವಣಾ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.