ನವದೆಹಲಿ: ಇಲ್ಲಿನ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಐಜಿಐ) ಹಾಂಕಾಂಗ್‌ನಿಂದ ಬಂದ ಮಹಿಳೆಯೊಬ್ಬರಿಂದ 26 'ಐಫೋನ್ 16 ಪ್ರೊ ಮ್ಯಾಕ್ಸ್' ಮೊಬೈಲ್‌ಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಆ್ಯಪಲ್ ಸಂಸ್ಥೆಯು ಬಹುನಿರೀಕ್ಷಿತ ಐಫೋನ್ 16 ಪ್ರೊ ಮ್ಯಾಕ್ಸ್ ಮಾದರಿ ಬಿಡುಗಡೆಗೊಳಿಸಿತ್ತು.
ಬೆಲೆ ಬಾಳುವ ಐಫೋನ್‌ಗಳನ್ನು ಮಹಿಳೆ ತನ್ನ ವ್ಯಾನಿಟಿ ಬ್ಯಾಗ್‌ನಲ್ಲಿರಿಸಿ ಅದನ್ನು ಟಿಶ್ಯೂ ಪೇಪರ್‌ನಿಂದ ಬಚ್ಚಿಟ್ಟಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಪ್ತಚರ ನಿಖರ ಮಾಹಿತಿ ಮೇರೆಗೆ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.
ದೇಶಕ್ಕೆ ಕಳ್ಳಸಾಗಣೆ ಮಾಡಲು ಯತ್ನಿಸಿದ ಐಫೋನ್‌ಗಳ ಅಂದಾಜು ಬೆಲೆ ₹37 ಲಕ್ಷ ಆಗಿದೆ.